ಹಾದಿತಪ್ಪಿದ ಕಾಡಾನೆ: ಹೆಚ್ಚಿದ ಆತಂಕ

5
ತಾಳತ್‌ಮನೆ, ಮೇಕೇರಿ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಗಂಡಾನೆಗಳು

ಹಾದಿತಪ್ಪಿದ ಕಾಡಾನೆ: ಹೆಚ್ಚಿದ ಆತಂಕ

Published:
Updated:
ಮೇಕೇರಿ ಸಮೀಪದ ಜಮೀನಿನಲ್ಲಿ ಕಾಣಿಸಿಕೊಂಡ ಕಾಡಾನೆಗಳು

ಮಡಿಕೇರಿ: ನಗರ ಹೊರವಲಯಕ್ಕೆ ಸೋಮವಾರ ಬಂದಿದ್ದ ಎರಡು ಕಾಡಾನೆಗಳು ಮತ್ತೆ ಮಂಗಳವಾರ ತಾಳತ್ತಮನೆ ಹಾಗೂ ಮೇಕೇರಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದವು.

ಸೋಮವಾರ ಸಂಜೆ ಮೇಕೇರಿ ಗ್ರಾಮದ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಆನೆಗಳನ್ನು ನಗರ ಪ್ರದೇಶದಿಂದ ದೂರಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದರು; ಮತ್ತೆ ನಗರದೊಳಗೆ ಪುಂಡಾನೆಗಳು ಬರಲು ಪ್ರಯತ್ನಿಸಿದ್ದು, ಆಸುಪಾಸಿನ ನಿವಾಸಿಗಳಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿತು.

ಅರಣ್ಯ ಪ್ರದೇಶದಿಂದ ದಾರಿತಪ್ಪಿ ಹೆದ್ದಾರಿಯಲ್ಲಿ ದರ್ಶನ ನೀಡಿದ್ದ ಆನೆಗಳು ಮತ್ತೆ ಕಾಡಿಗೆ ಹೋಗಲು ಹಿಂದೇಟು ಹಾಕುತ್ತಿವೆ. ಆರ್‌ಆರ್‌ಟಿ ಸಿಬ್ಬಂದಿ ಸಿಡಿಸುವ ಪಟಾಕಿ ಶಬ್ದಕ್ಕೆ ಎಲ್ಲೆಂದರಲ್ಲಿ ಓಡಾಡುತ್ತಿರುವ ಆನೆಗಳು, ಭಯ ಉಂಟು ಮಾಡುತ್ತಿವೆ. ಸಂಜೆಯವರೆಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ, ತುಂತುರು ಮಳೆ ಹಾಗೂ ಕತ್ತಲು ಆವರಿಸಿದ ಕಾರಣ, ಮಂಗಳವಾರ ಕಾರ್ಯಾಚರಣೆ ಸ್ಥಗಿತ ಮಾಡಲಾಯಿತು. ಮತ್ತೆ ಬುಧವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಯಲಿದೆ.
ಪುಂಡಾನೆಗಳು ವಿರಾಜಪೇಟೆ ರಸ್ತೆ ದಾಟಿ ತಾಳತ್‌ಮನೆ ಗ್ರಾಮದತ್ತ ತೆರಳಿದಾಗ ನಾಗರಿಕರ ಕಣ್ಣಿಗೆ ಬಿದ್ದಿವೆ; ಭಯಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಅಲ್ಲಿಗೂ ತೆರಳಿ ಕಾರ್ಯಾಚರಣೆ ನಡೆಸಿದರು.

ಬಾಳೆಯತ್ತ ಆಕರ್ಷಣೆ: ತಾಳತ್ ಮನೆ ಹಾಗೂ ಮೇಕೇರಿ ಗ್ರಾಮದತ್ತ ಮುಖ ಮಾಡಿದ್ದು, ಬಾಳೆ, ಹಲಸು ಇರುವ ಕಡೆಗಳಲ್ಲಿ ಹೆಚ್ಚು ಸಮಯಗಳನ್ನು ಕಳೆಯುತ್ತಿವೆ. ಇದ್ದರಿಂದ ಈ ಭಾಗದಲ್ಲಿರುವ ಮನೆಗಳಲ್ಲಿರುವ ಜನರಿಗೆ ಹೆಚ್ಚು ಭಯ ಮೂಡಿಸಿವೆ. ಸೋಮವಾರ ಬೆಳಿಗ್ಗೆಯಿಂದ ಆನೆಗಳನ್ನು ಕಾಡಿಗಟ್ಟುವಲ್ಲಿ 25ಕ್ಕೂ ಅಧಿಕ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದರೂ ಪ್ರಯೋಜನವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !