ಬುಧವಾರ, ನವೆಂಬರ್ 25, 2020
22 °C

ಫೋಟೊ ತೆಗೆಯುತ್ತಿದ್ದ ಬೈಕ್ ಸವಾರರ ಮೇಲೆ ಸಾಕಾನೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಸಮೀಪದ ಮತ್ತಿಗೋಡು ಸಾಕಾನೆ ಶಿಬಿರ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಸಾಕಾನೆ ಫೋಟೊ ತೆಗೆಯಲು ಹೋಗಿದ್ದ ಇಬ್ಬರ ಮೇಲೆ ಆನೆ ದಾಳಿ ನಡೆಸಿದ್ದು ಸವಾರರಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಬೈಕ್‌ನಲ್ಲಿ ಇಬ್ಬರು ತಿತಿಮತಿ ಕಡೆಯಿಂದ ಆನೆಚೌಕೂರಿನತ್ತ ತೆರಳುತ್ತಿದ್ದಾಗ ‘ಭೀಮ’ ಎಂಬ ಸಾಕಾನೆ, ಮತ್ತಿಗೋಡು ಶಿಬಿರದ ರಸ್ತೆ ಬದಿಯಲ್ಲಿ ನಿಂತಿತ್ತು. ಆಗ, ಬೈಕ್ ಸವಾರರು ಆನೆಯ ಫೋಟೊ ತೆಗೆಯಲು ಮುಂದಾಗಿದ್ದಾರೆ. ಕೂಡಲೇ ಆನೆ ಕೆರಳಿ ಫೋಟೊ ತೆಗೆಯುವವರತ್ತ ತಿರುಗಿದೆ. ಬೈಕ್ ಅನ್ನು ರಸ್ತೆಯಲ್ಲಿಯೇ ಬಿಟ್ಟು ಓಡಿದ ಸವಾರರು ಜೀವ ಉಳಿಸಿಕೊಂಡಿದ್ದಾರೆ.

ಈ ವೇಳೆಯಲ್ಲಿ ಬೈಕ್ ಮಧ್ಯ ರಸ್ತೆಯಲ್ಲಿ ಬಿದ್ದಿದ್ದು ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಆಗಿತ್ತು. ಆನೆ ಮಾವುತರು ಸ್ಥಳಕ್ಕೆ ಬಂದು ಬೈಕ್ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸವಾರರು ಯಾರೆಂದು ತಿಳಿದುಬಂದಿಲ್ಲ ಎಂದು ಶಿಬಿರದ ಆರ್‌ಎಫ್‌ಒ ಕಿರಣ್ ಕುಮಾರ್ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು