ಸಿದ್ದಾಪುರ : ಇಲ್ಲಿನ ಹೊಸೂರು ಬೆಟ್ಟಗೇರಿ ಗ್ರಾಮದ ಕೆರೆಯಲ್ಲಿ ಮುಳುಗಿ ಕಾಡಾನೆಯೊಂದು ಮೃತಪಟ್ಟಿದೆ.
ಅಮ್ಮತ್ತಿ ಸಮೀಪದ ಹೊಸೂರು ಬೆಟ್ಟಗೇರಿಯ ಕನ್ನಡ ಮಠದ ಕಾಫಿ ತೋಟದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿತ್ತು. ಹಿಂಡಿನಲ್ಲಿದ್ದ 10 ವರ್ಷದ ಸಲಗವೊಂದು ನೀರು ಕುಡಿಯಲು ಕೆರೆಗೆ ಇಳಿದಿದ್ದು, ಕೆಸರಿನಲ್ಲಿ ಜಾರಿ ಸಾವನ್ನಪ್ಪಿದೆ.
ಗುರುವಾರ ಕಾರ್ಮಿಕರು ಕೆರೆಯಲ್ಲಿ ಬಿದ್ದಿದ್ದ ಕಾಡಾನೆ ಮೃತದೇಹವನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಅಧಿಕಾರಿಗಳು ಕಳೇಬರವನ್ನು ಹೊರತೆಗೆದಿದ್ದು, ವನ್ಯಜೀವಿ ವೈದ್ಯಾಧಿಕಾರಿ ಡಾ.ಚಿಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದರು.
ವಿರಾಜಪೇಟೆ ವಿಭಾಗದ ಉಪ ಸಂರಕ್ಷಣಾಧಿಕಾರಿ ಜಗನ್ನಾಥ್, ಎಸಿಎಫ್ ಗೋಪಾಲ್, ವಲಯ ಅರಣ್ಯ ಅಧಿಕಾರಿ ಕೆ.ವಿ.ಶಿವರಾಮ್, ಇಲಾಖೆಯ ಅಧಿಕಾರಿಗಳು ಈ ಸಂದರ್ಭ ಇದ್ದರು.