ಸಿದ್ದಾಪುರ: ಕಾಫಿ ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಿಸಿ ಮಾಲ್ದಾರೆ ಅರಣ್ಯಕ್ಕೆ ಅಟ್ಟಿದರು.

ವಿರಾಜಪೇಟೆ ವಲಯದ ಗುಹ್ಯ, ಪಳ್ಳಕ್ಕರೆ, ಪುಲಿಯೇರಿ ಭಾಗದ ಕಾಫಿ ತೋಟದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಕಳೆದ ಎರಡು ದಿನಗಳಿಂದ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ಶನಿವಾರ ಪಳ್ಳಕ್ಕರೆ ಭಾಗದಲ್ಲಿ 3 ಕಾಡಾನೆಗಳು ಕಾಣಿಸಿಕೊಂಡಿದ್ದು, ವಲಯ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ಗುಹ್ಯ ಗ್ರಾಮದ ಮೂಲಕ ಮುಖ್ಯ ರಸ್ತೆ ದಾಟಿಸಲಾಯಿತು. ಬಳಿಕ ಮಾಲ್ದಾರೆ ಅರಣ್ಯದತ್ತ ಕಳುಹಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರು.

ಅರಣ್ಯಕ್ಕೆ ಅಟ್ಟಿದ ಕಾಡಾನೆಗಳು ಮರಳಿ ತೋಟಕ್ಕೆ ಬರುತ್ತಿದ್ದು, ಕಾಡಾನೆಗಳನ್ನು ಶಾಶ್ವತವಾಗಿ ಅರಣ್ಯಕ್ಕೆ ಅಟ್ಟಲು ಯೋಜನೆ ರೂಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಜನಾರ್ದನ, ದೇವರಾಜ್, ಅರುಣ್ ಹಾಗೂ ಆನೆ ಕಾರ್ಯಪಡೆ ತಂಡ. ಆರ್ಆರ್ಟಿ ತಂಡದ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.