ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಜರ್ ಬದಲಿಸಿ ಲಕ್ಷಾಂತರ ರೂಪಾಯಿ ವಂಚನೆ

ಕುಶಾಲನಗರದಲ್ಲಿ ಐವರು ಆರೋಪಿಗಳ ಬಂಧನ
Last Updated 19 ಸೆಪ್ಟೆಂಬರ್ 2022, 14:12 IST
ಅಕ್ಷರ ಗಾತ್ರ

ಕುಶಾಲನಗರ: ಕೊರಿಯರ್ ಮೂಲಕ ವಿವಿಧ ಕಂಪನಿಗಳ ಅಸಲಿ ಚಾರ್ಜರ್ ತರಿಸಿಕೊಂಡು ಅದರಲ್ಲಿ ನಕಲಿ ಚಾರ್ಜರ್‌ಗಳನ್ನು ಇರಿಸಿ ಕಂಪನಿಗೆ ಹಿಂತಿರುಗಿಸುವ ವ್ಯವಸ್ಥಿತ ಜಾಲವನ್ನು ಪಟ್ಟಣದ ಪೊಲೀಸರು ಬೇಧಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸುರತ್ಕಲ್‌ನ ಹಿತೇಶ್ ರೈ, ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಬೊಳ್ಳೂರಿನ ಎಸ್.ಆರ್.ಧರ್ಮ, ರಂಗಸಮುದ್ರ ಗ್ರಾಮದ ತೀರ್ಥೆಶ್ ರೈ, ಕುಶಾಲನಗರ ಆದಿಶಂಕರಾಚಾರ್ಯ ಬಡಾವಣೆಯ ಎಂ.ಟಿ.ಕೀರ್ತನ್, ಶಿರಂಗಾಲದ ಎಸ್.ಆರ್.ವಿನಯ್ ಬಂಧಿತರು.

‘ಆರೋಪಿಗಳು ಪಾರ್ಸೆಲ್‌ ರೂಪದಲ್ಲಿ ಬರುತ್ತಿದ್ದ ಪ್ರತಿಷ್ಠಿತ ಕಂಪನಿಗಳ ಚಾರ್ಜರ್‌ಗಳನ್ನು ತೆಗೆದು ಪಾರ್ಸೆಲ್‌ನಲ್ಲಿ ನಕಲಿ ಚಾರ್ಜರ್ ಇಡುತ್ತಿದ್ದರು. ಅಸಲಿ ಜಾರ್ಜರ್‌ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ವಿವಿಧ ಕಂಪನಿಗಳಿಗೆ ಒಟ್ಟು ₹ 25 ಲಕ್ಷ ವಂಚಿಸಿದ್ದಾರೆ. ಬಂಧಿತರಿಂದ ₹ 14 ಲಕ್ಷ ನಗದು, ₹ 73,500 ಮೌಲ್ಯದ ಅಸಲಿ ಜಾರ್ಜರ್, 16 ಬಾಕ್ಸ್ ನಕಲಿ ಮೊಬೈಲ್ ಜಾರ್ಜರ್‌ಗಳು, 3 ಮೊಬೈಲ್, ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT