ಭಾನುವಾರ, ಏಪ್ರಿಲ್ 5, 2020
19 °C

ಸುಂಟಿಕೊಪ್ಪದಲ್ಲಿ ಖೋಟಾ ನೋಟು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಂಟಿಕೊಪ್ಪ (ಕೊಡಗು): ಹೋಬಳಿ ವ್ಯಾಪ್ತಿಯಲ್ಲಿ ಖೋಟಾನೋಟು ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಕೂಲಿ ಕಾರ್ಮಿಕರು ಆತಂಕಗೊಂಡಿದ್ದಾರೆ.

ಇಲ್ಲಿನ ವಂದನಾಬಾರ್ ಮಾಲೀಕ ಪಟ್ಟೆಮನೆ ಶೇಷಪ್ಪ ಅವರು ಗುರುವಾರ ಬ್ಯಾಂಕ್‌ಗೆ ಹಣ ಸಂದಾಯ ಮಾಡಲು ಎಣಿಕೆ ಮಾಡುತ್ತಿದ್ದಾಗ ₹ 100 ಮುಖಬೆಲೆಯ ನಂಬರ್‌ 522671 ಖೋಟಾ ನೋಟು ಪತ್ತೆಯಾಗಿದೆ.

ಈಚೆಗೆ ಪಟ್ಟಣದ ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್ ತುಂಬಿಸಲು ಬಂದಿದ್ದ ಲಾರಿ ಚಾಲಕನೊಬ್ಬ ₹ 500 ಮುಖಬೆಲೆಯ ಒಂದೇ ಸಂಖ್ಯೆಯ ನಾಲ್ಕು ನೋಟುಗಳನ್ನು ನೀಡಿದ್ದ. ಒಂದೇ ಸಂಖ್ಯೆ ಇರುವುದನ್ನು ಗಮನಿಸಿದ ಬಂಕ್‌ ಸಿಬ್ಬಂದಿ, ಚಾಲಕನನ್ನು ಪ್ರಶ್ನಿಸಿದ್ದಾರೆ. ಇದರಿಂದ ವಿಚಲಿತನಾದ ಚಾಲಕನ ಯಾರೋ ಕೊಟ್ಟಿದ್ದು ಎಂದು ಹೇಳಿ ಅಲ್ಲಿಂದ ತೆರಳಿದ್ದ.

ಈ ಹಿಂದೆಯೂ ಇಲ್ಲಿನ ವಿಜಯ ಬ್ಯಾಂಕ್‌ಗೆ ತೋಟದ ಕಾರ್ಮಿಕರು ನೀಡಿದ್ದ ₹ 2,000 ಮತ್ತು ₹ 200 ಮುಖಬೆಲೆಯ ಖೋಟಾ ಎಂದು ಪತ್ತೆಯಾಗಿದ್ದವು.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾರ್ಮಿಕರೇ ಹೆಚ್ಚಾಗಿ ನೆಲೆಸಿದ್ದು, ಅವರಿಗೆ ಈ ಖೋಟಾನೋಟು ನೀಡುವ ವ್ಯವಸ್ಥಿತ ಜಾಲವೊಂದು ಕೆಲಸ ಮಾಡುತ್ತಿದೆ. ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು