ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 17.63 ಲಕ್ಷ ಮತದಾರರು

ಅಂತಿಮ ಮತದಾರರ ಪಟ್ಟಿ ಪ್ರಕಟ: 72,478 ಹೊಸ ಮತದಾರರ ಸೇರ್ಪಡೆ
Last Updated 1 ಮಾರ್ಚ್ 2018, 12:14 IST
ಅಕ್ಷರ ಗಾತ್ರ

ವಿಜಯಪುರ: ವಿಧಾನಸಭೆ ಚುನಾವಣೆಯ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಪ್ರಕಟಿಸಿದರು.

2018ರ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಜಿಲ್ಲೆಯ ಮತದಾರರ ಕರಡು ಪಟ್ಟಿಯನ್ನು ಕಳೆದ ನವೆಂಬರ್ 30 ರಂದು ಪ್ರಕಟಿಸಲಾಗಿತ್ತು. ಅದರಂತೆ ಇಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯ ಎಂಟು ವಿಧಾನಸಭಾ ಮತಕ್ಷೇತ್ರದಲ್ಲಿ 9,06,407 ಪುರುಷ ಹಾಗೂ 8,56,896 ಮಹಿಳಾ ಮತದಾರರು, ಇತರೆ ಸೇರಿದಂತೆ ಒಟ್ಟು 17,63,303 ಮತದಾರರಿದ್ದಾರೆ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳಿಸಿ ಅವರು ಮಾಹಿತಿ ನೀಡಿದರು.

ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ಆಯಾ ತಾಲ್ಲೂಕು ತಹಶೀಲ್ದಾರ್‌ ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಪ್ರಕಟಿಸಲಾಗುವುದು. ಚುನಾವಣಾ ಆಯೋಗದ ನಿರ್ದೇಶಶನದಂತೆ ನಿರಂತರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಲಿದ್ದು, ಹೆಚ್ಚುವರಿ ಮತದಾರರ ಸೇರ್ಪಡೆ ಹಾಗೂ ಕಡಿತಗೊಳಿಸಲಾಗುವುದು. ಜಿಲ್ಲೆಯಲ್ಲಿ ಸದ್ಯ ಪ್ರಕಟವಾಗಿರುವ ಮತದಾರರ ಅಂತಿಮ ಪಟ್ಟಿಯನ್ವಯ 72,478 ಹೊಸ ಮತದಾರರು ಸೇರ್ಪಡೆಗೊಂಡಿದ್ದು, 56,448 ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಮತದಾರರ ಪಟ್ಟಿ ಸೇರ್ಪಡೆ ಹಾಗೂ ತೆಗೆಯುವ ಹಾಕುವ ಕೆಲಸ ಮಾಡಲಾಗಿದೆ. ಮತದಾರರ ಪಟ್ಟಿಯಿಂದ ನಕಲಿ ಮತದಾರರನ್ನು ತೆಗೆದು ಹಾಕುವ ಕುರಿತಂತೆ ಕೆಲವೊಂದಷ್ಟು ದೂರುಗಳು ಬಂದಿವೆ. ನಿಗದಿತ ದೂರಿನನ್ವಯ ಸೂಕ್ತ ಕ್ರಮವನ್ನು ಸಹ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದೇ ವೇಳೆ ಜಿಲ್ಲಾಧಿಕಾರಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತದಾರರ ಯಾದಿಯ ಅಂತಿಮ ಪಟ್ಟಿಯನ್ನು ನೀಡಿದರು.

***
ತಾಲ್ಲೂಕುವಾರು ಮತದಾರರು

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 1,03,038 ಪುರುಷರು, 97,844 ಮಹಿಳೆಯರು ಸೇರಿ ಒಟ್ಟು 2,00,882.

ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180.

ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 1,01,345 ಪುರುಷರು, 95,044 ಮಹಿಳೆಯರು ಸೇರಿ ಒಟ್ಟು 1,96,389.

ಬಬಲೇಶ್ವರ ಮತಕ್ಷೇತ್ರದಲ್ಲಿ 1,06,256 ಪುರುಷರು, 1,02,647 ಮಹಿಳೆಯರು ಸೇರಿ ಒಟ್ಟು 2,08,903.

ವಿಜಯಪುರ ನಗರ ಮತಕ್ಷೇತ್ರದಲ್ಲಿ 1,21,753 ಪುರುಷರು, 1,19,882 ಮಹಿಳೆಯರು ಸೇರಿ ಒಟ್ಟು 2,41,635.

ನಾಗಠಾಣ ಮತಕ್ಷೇತ್ರದಲ್ಲಿ 1,32,527 ಪುರುಷರು, 1,24,284 ಮಹಿಳೆಯರು ಸೇರಿ ಒಟ್ಟು 2,56,811.

ಇಂಡಿ ಮತಕ್ಷೇತ್ರದಲ್ಲಿ 1,18,626 ಪುರುಷರು, 1,09,818 ಮಹಿಳೆಯರು ಸೇರಿ ಒಟ್ಟು 2,28,444.

ಸಿಂದಗಿ ಮತಕ್ಷೇತ್ರದಲ್ಲಿ 1,15,455 ಪುರುಷರು, 1,07,604 ಮಹಿಳೆಯರು ಸೇರಿ ಒಟ್ಟು 2,23,059.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT