ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಇಲ್ಲಿನ ಪೊನ್ನಂಪೇಟೆ ಬಳಿಯ ಚಿಕ್ಕಮಂಡೂರಿನಲ್ಲಿ ಸೋಮವಾರ ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಗ, ಆತನ ರಕ್ಷಣೆಗೆ ಧಾವಿಸಿದ ತಂದೆ ಮೃತಪಟ್ಟಿದ್ದಾರೆ. ಕೆಂಚ (8) ಹಾಗೂ ಜೇನುಕುರುಬರ ಶಿವಣ್ಣ (40) ಮೃತರು.

ಕಾಫಿತೋಟವೊಂದರ ಲೈನ್ಮನೆಯಲ್ಲಿ ವಾಸವಿದ್ದ ಶಿವಣ್ಣ, ಕುಟುಂಬದವರು ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದಾಗ ಅವಘಡ ನಡೆದಿದೆ.

ಕಣ್ಣೆದುರೇ ಮಗ, ಪತಿಯನ್ನು ಕಳೆದುಕೊಂಡ ಸುಮತಿ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಲಕ ಕೆಂಚ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ. ಕುಟ್ಟ ಸಿಪಿಐ ಶಿವರುದ್ರಪ್ಪ, ಶ್ರೀಮಂಗಲ ಪಿಎಸ್ಐ ರವೀಂದ್ರ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.