ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕೆ

Last Updated 8 ನವೆಂಬರ್ 2022, 6:20 IST
ಅಕ್ಷರ ಗಾತ್ರ

ಮಡಿಕೇರಿ: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ 3ನೇ ಸುತ್ತಿನ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ಗೋಪೂಜೆ ನೆರವೇರಿಸಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸೋಮವಾರಪೇಟೆ ತಾಲ್ಲೂಕಿನ ಕುಂಬೂರು ಗ್ರಾಮದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಕೊಡಿಸಬೇಕು’ ಎಂದು ಅವರು ಸಲಹೆ ನೀಡಿದರು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಾದಾಮಿ, ಹಿರಿಯ ಪಶುವೈದ್ಯ ಹಿರಿಯ ಪರಿವೀಕ್ಷಕ ರಾದ ಸತ್ತಾರ್ ಖಾನ್ ಇತರರು ಇದ್ದರು.

ನ. 8ರಂದು ಮಡಿಕೇರಿ ತಾಲ್ಲೂಕಿನ ಚೆಂಬು, ಕೊಳಕೇರಿ, ಮದೆನಾಡು ಮತ್ತು ತಣ್ಣಿಮಾನಿ, ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ, ಅರಮೇರಿ, ಕುಂಜಿಲಗೇರಿ, ಬಿಳುಗುಂದ ಮತ್ತು ಗುಹ್ಯ, ಸೋಮವಾರಪೇಟೆ ತಾಲ್ಲೂಕಿನ ಕುಂಬೂರು, ಕುಸುಬೂರು, ಬಳಗುಂದ, ಹಾರೋಹಳ್ಳಿ, ನಿಡ್ತ, ಬೆಳ್ಳಾರಳ್ಳಿ, ಊರುಗುತ್ತಿ, ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಮತ್ತು ಉಲುಗುಲಿ, ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿ, ಮತ್ತೂರು, ಹೈಸೊಡ್ಲೂರು ಮತ್ತು ಬಾಳೆಲೆಗಳಲ್ಲಿ 3ನೇ ಸುತ್ತಿನ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ.

ನ. 9ರಂದು ಮಡಿಕೇರಿ ತಾಲ್ಲೂಕಿನ ಭಾಗಮಂಡಲ (ತಾವೂರು), ಚೆಂಬು, ಕಾಟಕೇರಿ, ಕೊಳಕೇರಿ, ಮದೆನಾಡು, ಸಂಪಾಜೆ ತಣ್ಣಿಮಾನಿ, ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ, ಬೇಟೋಳಿ, ಅರಮೇರಿ, ಕುಂಜಿಲಗೇರಿ, ಬಿಳುಗುಂದ, ಗುಹ್ಯ, ಬಾಳುಗೋಡು. ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು, ಸೋಮವಾರಪೇಟೆ, ಗರಗಂದೂರು, ಹಾರೋಹಳ್ಳಿ, ಗೋಪಾಲಪುರ, ಬಿದರೂರು, ಊರುಗುತ್ತಿ. ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು, ಹೊರೂರು, ಪೊನ್ನಂಪೇಟೆ ತಾಲ್ಲೂಕಿನ ಕೆ.ಬಾಡಗ, ಮತ್ತೂರು, ಹೈಸೊಡ್ಲೂರು, ದೇವನೂರು ಗ್ರಾಮಗಳಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT