ಪ್ರವಾಹ: ಶವ ಸಾಗಿಸಲು ಹರಸಾಹಸ

5

ಪ್ರವಾಹ: ಶವ ಸಾಗಿಸಲು ಹರಸಾಹಸ

Published:
Updated:
Deccan Herald

ಮಡಿಕೇರಿ: ಮಳೆಯಿಂದ ಹಳ್ಳ, ಕೊಳ್ಳಗಳು ಕೊಡಗಿನಲ್ಲಿ ತುಂಬಿ ಹರಿಯುತ್ತಿದ್ದು‌ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ‌ ಸಮಸ್ಯೆ‌ ಉಂಟಾಗಿದೆ.
ಭಾನುವಾರ ಸಂಜೆ ಮಡಿಕೇರಿ‌ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಣ್ಣಂಗೇರಿ ನಿವಾಸಿ ಮಾಚಮ್ಮ ಅವರ ಶವವನ್ನು ಸ್ವಗ್ರಾಮಕ್ಕೆ‌ ತರಲು‌ ಗ್ರಾಮಸ್ಥರು‌ ಹರಸಾಹಸ ಪಡಬೇಕಾಯಿತು.

ಗ್ರಾಮದ ಸಮೀಪವೇ ಹರಿಯುವ ನದಿಯಲ್ಲಿ ದಿಢೀರ್ ಆಗಿ ಉಂಟಾದ ಪ್ರವಾಹದಿಂದ ವಾಹನ ಸಂಚರಿಸಲು ಸಾಧ್ಯವಾಗಲಿಲ್ಲ. ಶವವನ್ನು ಗ್ರಾಮಸ್ಥರೇ ಹೊತ್ತು‌ ಸಾಗಿಸಿದರು. ಸೇತುವೆಯ ಮೇಲೆ ನೀರು ಹರಿಯುತ್ತಿರುವುದು ಸಮಸ್ಯೆಗೆ ಕಾರಣವಾಯಿತು.

ಸೋಮವಾರ ಅಂತ್ಯಸಂಸ್ಕಾರಕ್ಕೂ‌ ಪ್ರವಾಹದ ನೀರಿನಲ್ಲೇ ಬರಬೇಕಾದ ಸ್ಥಿತಿಯಿದೆ ಎಂದು‌ ಗ್ರಾಮಸ್ಥರು ತಿಳಿಸಿದ್ದಾರೆ.

ಕಳೆದ ವರ್ಷವೇ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಆದರೂ, ಸೇತುವೆಯನ್ನು‌ ಎತ್ತರಿಸಿಲ್ಲ. ಹೀಗಾಗಿ, ಮಳೆಗಾಲದಲ್ಲಿ ಪ್ರತಿವರ್ಷವೂ‌ ಸಮಸ್ಯೆ ಉಂಟಾಗುತ್ತಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ‌ ಸ್ಟಾರ್ ಹೋಟೆಲ್‌ಗಳು, ಹೋಂಸ್ಟೆಗಳು‌ ಇದ್ದರೂ‌ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುಖಂಡರು‌ ಅಳಲು‌ ತೋಡಿಕೊಂಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !