ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲವತ್ತತೆ ವೃದ್ಧಿಗೆ ಗೊಬ್ಬರ ಬಳಕೆ

Last Updated 29 ಏಪ್ರಿಲ್ 2018, 11:01 IST
ಅಕ್ಷರ ಗಾತ್ರ

ಮುಳಗುಂದ: ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದ ಮುಂಗಾರಿನ ಬಿತ್ತನೆ ಪೂರ್ವದಲ್ಲಿ ರೈತರು ತಮ್ಮ ಹೊಲಗಳ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಕೊಟ್ಟಿಗೆ ಗೊಬ್ಬರಕ್ಕೆ ಮಾರುಹೋಗಿದ್ದಾರೆ.

ಕೊಟ್ಟಿಗೆ ಗೊಬ್ಬರದಲ್ಲಿ ಅಧಿಕ ಪೋಷಕಾಂಶ ಹೊಂದಿದ್ದು, ಅದು ಬೆಳೆಗಳಿಗೆ ಅಮೃತವಾಗಿ ಪರಿಣಮಿಸಲಿದೆ. ರೈತರು ಕೊಟ್ಟಿಗೆ ಗೊಬ್ಬರ ಹೊಲಗಳಿಗೆ ಹಾಕುವುದರೊಂದಿಗೆ ನೇಗಿಲು, ಹರಗುವುದು ಹಾಗೂ ಉಳುಮೆ ಕಾರ್ಯಗಳನ್ನೂ ಕೈಗೊಂಡಿದ್ದಾರೆ. ಒಂದು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರಕ್ಕೆ ₹ 1,500ರಿಂದ ₹ 2,000 ಬೆಲೆ ಇದೆ’ ಎಂದು ಯಳವತ್ತಿಯ ರೈತ ದತ್ತಪ್ಪ ಹೇಳಿದರು.

‘ಕೃಷಿ ಭೂಮಿಗೆ ಕೊಟ್ಟಿಗೆ ಗೊಬ್ಬರ ಹಾಕುವುದರಿಂದ ಮಣ್ಣಿನ ಕಣಗಳ ರಚನೆ ಹೆಚ್ಚುತ್ತದೆ. ಇದರಿಂದ ಭೂಮಿ ಫಲವತ್ತವಾಗುತ್ತದೆ. ತೇವಾಂಶ ಕೂಡ ಹೆಚ್ಚುತ್ತದೆ’ ಎಂದು ಸಹಾಯಕ ಕೃಷಿ ಅಧಿಕಾರಿ ಎಂ.ಬಿ.ಸುಂಕಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT