ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಮುಸ್ಲಿಂ ಕಪ್ ಕ್ರಿಕೆಟ್: ಫ್ರೀಡಮ್ ಬಾಯ್ಸ್ ಹುಂಡಿ ಚಾಂಪಿಯನ್

ಕೊಡಗು ಮುಸ್ಲಿಂ ಕಪ್ ಕ್ರಿಕೆಟ್: ಬ್ಯಾರಿ ವಾರಿಯರ್ಸ್‌ ಮಡಿಕೇರಿ ರನ್ನರ್ಸ್
Last Updated 15 ಜೂನ್ 2022, 4:06 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್‌.ಆರ್.ಎಸ್ ಕ್ರಿಕೆಟರ್ಸ್ ಮೂರ್ನಾಡು ಆಶ್ರಯದಲ್ಲಿ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆದ 18ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಪ್ರಶಸ್ತಿಯನ್ನು 8ನೇ ಬಾರಿ ಫ್ರೀಡಮ್ ಬಾಯ್ಸ್ ಹುಂಡಿ ತಂಡ ಪಡೆದುಕೊಂಡಿತು.

ಫೈನಲ್ ಪಂದ್ಯವು ಫ್ರೀಡಮ್ ಬಾಯ್ಸ್ ಹುಂಡಿ ಹಾಗೂ ಬ್ಯಾರಿ ವಾರಿಯರ್ಸ್‌ ಮಡಿಕೇರಿ ತಂಡಗಳ ನಡುವೆ ನಡೆಯಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬ್ಯಾರಿ ವಾರಿಯರ್ಸ್ ಮಡಿಕೇರಿ ತಂಡವು ಅಸ್ಪಾನ್ ಅವರ 29 ರನ್‌ಗಳ ನೆರವಿನಿಂದ 6 ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 49 ರನ್ ಕಲೆ ಹಾಕಿತು.

50 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಫ್ರೀಡಮ್ ಬಾಯ್ಸ್ ಹುಂಡಿ ತಂಡವು ರಫೀಕ್ ಅವರ 24 ರನ್‌ಗಳ ನೆರವಿನಿಂದ 8 ವಿಕೆಟ್ ಗಳ ಅಂತರದಿಂದ ಗೆದ್ದು 18 ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಪಡೆಯಿತು. ಬ್ಯಾರಿ ವಾರಿಯರ್ಸ್‌ ಮಡಿಕೇರಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.

ಬೆಸ್ಟ್ ಟೀಮ್ ಆಫ್ ದಿ ಟೂರ್ನಮೆಂಟ್ ಬ್ಲ್ಯಾಕ್ ಸ್ಟೋನ್ ಕೂಡಿಗೆ, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಫ್ರೀಡಮ್ ಬಾಯ್ಸ್ ರಫೀಕ್ ಹುಂಡಿ, ಬೆಸ್ಟ್ ಫೀಲ್ಡರ್ ಶಫೀಕ್ ಕುಂಡಂಡ ಲಕ್ಕಿ ಬಾಯ್ಸ್ ಕುಂಜಿಲ, ಉದಯೋನ್ಮುಖ ಆಟಗಾರ ಕ್ರೌನ್ ವಿರಾಜಪೇಟೆ ತಂಡದ ಅಫ್ರಾನ್, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಕೆವೈಸಿಸಿ ಕಡಂಗ ತಂಡದ ಅಸ್ಕರ್, ಬೆಸ್ಟ್ ಬೌಲರ್ ಬ್ಲ್ಯಾಕ್ ಕೋಬ್ರಾ ವಿರಾಜಪೇಟೆ
ತಂಡದ ಇಚ್ಚಾವು, ಮ್ಯಾನ್ ಆಫ್ ಸೀರಿಯಸ್ ಫ್ರೀಡಮ್ ಬಾಯ್ಸ್ ಹುಂಡಿ ತಂಡದ ರಿಯಾಸ್ (ಇಯ್ಯಾ ) ಪಡೆದುಕೊಂಡರು.

ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಸಂಸ್ಥಾಪಕ ಕುಪ್ಪೋಡಂಡ ರಶೀದ್ ಎಡಪಲಾ ಹಾಗೂ ಕೊಡಗಿನ ಹಿರಿಯ ಆಟಗಾರ ಮುಜೀಬ್ ಮೂರ್ನಾಡು ಅವರನ್ನು ಎಸ್.ಆರ್.ಎಸ್ ಕ್ರಿಕೆಟರ್ಸ್ ಮೂರ್ನಾಡು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ತೀರ್ಪುಗಾರರಾಗಿ ಮದನ್ ಯಾಲದಾಳು, ದಿವಿನ್ ರೈ ಗಾಳಿಬೀಡು, ವೀಕ್ಷಕ ವಿವರಣೆಗಾರನಾಗಿ ದಿವಾಕರ್ ಉಪ್ಪಳ, ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT