7

ಶಾಲೆಗೆ ಬೆಂಚು, ಡೆಸ್ಕುಗಳ ಕೊಡುಗೆ

Published:
Updated:
ಸುಂಟಿಕೊಪ್ಪ ಸಮೀಪದ ಹೊರೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಓಲ್ಡ್ ಕೇಂಟ್ ರೆಸಾರ್ಟ್‌ನ ಮಾಲೀಕ ನಾಸೀರುದ್ದಿನ್ ಅವರು 40 ಬೆಂಚು ಹಾಗೂ 40 ಡೆಸ್ಕ್‌ಗಳನ್ನು ನೀಡಿದರು

ಸುಂಟಿಕೊಪ್ಪ: ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಯ ಹೊರೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಓಲ್ಡ್ ಕೇಂಟ್ ರೆಸಾರ್ಟ್ ಮಾಲೀಕ ನಾಸಿರುದ್ದೀನ್‌ ಅವರು ಶಾಲಾ ಮಕ್ಕಳಿಗೆ 40 ಬೆಂಚು ಹಾಗೂ 40 ಡೆಸ್ಕ್‌ಗಳನ್ನು ಉಚಿತವಾಗಿ ನೀಡಿದರು.

ನಂತರ ಮಾತನಾಡಿದ ಅವರು, ‘ಸರ್ಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳ ಹಾಗೆ ಹೆಚ್ಚಿನ ಸೌಲಭ್ಯಗಳು ಇಲ್ಲದಿದ್ದರೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಮತ್ತು ಶಿಸ್ತು ಅವರನ್ನು ಮುಖ್ಯವಾಹಿನಿಗೆ ಕೊಂಡೊಯ್ಯಲಿದೆ. ಮಕ್ಕಳ ಭವಿಷ್ಯದ ಹಿನ್ನೆಲೆಯಲ್ಲಿ ನನ್ನದೊಂದು ಪುಟ್ಟ ಕೊಡುಗೆ’ ಎಂದರು.

ಕಾಫಿ ಬೆಳೆಗಾರರಾದ ಸಿ.ಎ.ಕರುಂಬಯ್ಯ, ಕೆ.ಡಿ.ಪೊನ್ನಪ್ಪ, ಸ್ಯಾಂಡಲ್‌ವುಡ್ ತೋಟದ ಮಾಲೀಕ ಫೈಸಲ್, ಕೆದಕಲ್ ಗ್ರಾಮ ಪಂಚಾಯಿತಿ ಸದಸ್ಯ ದೇವಿಪ್ರಸಾದ್ ಕಾಯರ್‌ಮಾರ್, ಹೊರೂರು ತೋಟದ ವ್ಯವಸ್ಥಾಪಕ ವೆಂಕಟಾಚಲಂ, ಶಾಲಾ ಸಂಪನ್ಮೂಲ ವ್ಯಕ್ತಿ ಪುರುಷೋತ್ತಮ ಪೂಜಾರಿ, ಶಾಲಾ ಮುಖ್ಯ ಶಿಕ್ಷಕಿ ನಾಗರತ್ನ, ಶಿಕ್ಷಕಿ ಜಯಶ್ರೀ, ಉದಯಕುಮಾರ್, ಅಂಗನವಾಡಿ ಕಾರ್ಯಕರ್ತೆ ನಳಿನಿ ಶಿವಣ್ಣ ಇದ್ದರು. ನಂತರ ನಾಸಿರುದ್ದೀನ್‌ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !