ಗೋಣಿಕೊಪ್ಪಲು: ತನ್ನ ಮನೆಯ ಹಿತ್ತಲಲ್ಲಿ ಗಾಂಜಾ ಬೆಳೆದಿದ್ದ ತಿತಿಮತಿ ಬಳಿಯ ದೊಡ್ಡರೇಷ್ಮೆ ಗಿರಿಜನ ಹಾಡಿಯ ಜೇನುಕುರುಬರ ಬಸವ (69)ನನ್ನು ಗೋಣಿಕೊಪ್ಪಲು ಪೊಲೀಸರು ಶುಕ್ರವಾರ ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಬಸವ ಗಾಂಜಾ ವ್ಯಸನಿ ಆಗಿದ್ದು ತನ್ನ ಸ್ವಂತ ಬಳಕೆಗೆ ಮನೆಯ ಹಿಂದೆ 3 ಗಿಡಗಳನ್ನು ಬೆಳೆಸಿದ್ದ ಎನ್ನಲಾಗಿದೆ. ಇದು ಅಂದಾಜು 2 ಕಿಲೋ ನಷ್ಟು ತೂಕವಿದೆ. ಬಸವ ತಾನು ಬಳಸುವುದರ ಜತೆಗೆ ಇತರರಿಗೂ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಗೋಣಿಕೊಪ್ಪಲು ಪಿಎಸ್ಐ ಪ್ರದೀಪ್ ಹಾಗೂ ಸಿಬ್ಬಂದಿ ಆರೋಪಿ ಬಸವನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-51-2072689290

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.