ಗೋಣಿಕೊಪ್ಪಲು: ಬಾಳೆಲೆ ಬಳಿಯ ನಿಟ್ಟೂರು ಜಾಗಲೆ ಗ್ರಾಮದ ಕೃಷಿಕ ಅಳಮೇಂಗಡ ಬೋಸ್ ಮಂದಣ್ಣನವರ ಕೆರೆಯಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡು ಆತಂಕ ಮೂಡಿಸಿದೆ.

ಲಕ್ಷ್ಮಣತೀರ್ಥ ನದಿ ದಡದಲ್ಲಿರುವ ಜಾಗಲೆಯ ಬೋಸ್ ಮಂದಣ್ಣ ತಮ್ಮ ಮನೆಯ ಪಕ್ಕದಲ್ಲಿಯೇ ವಿಶಾಲವಾದ ಮೂರು ಕೆರೆ ಮಾಡಿಕೊಂಡಿದ್ದಾರೆ. ಬೇಸಿಗೆಯಲ್ಲಿ ಈ ಕೆರೆಗಳ ನೀರನ್ನು ಕಾಫಿ ತೋಟ ಮತ್ತು ಅಡಿಕೆ ತೋಟಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಮೀನು ಕೃಷಿಕರಿಂದ ಸುಮಾರು 35 ಸಾವಿರದಷ್ಟು ಮೀನಿನ ಮರಿಗಳನ್ನು ಖರೀದಿಸಿ ತಂದು ಕೆರೆಯಲ್ಲಿ ಸಾಕಿದ್ದರು. ಉತ್ತಮ ಪೋಷಣೆಯಿಂದ ಬೆಳೆದಿದ್ದ ಮೀನುಗಳನ್ನು ಹಿಡಿದು ಮಾರಾಟ ಮಾಡಬೇಕು ಎನ್ನುಷ್ಟರಲ್ಲಿ ಮೊಸಳೆ ನುಗ್ಗಿ ಅವುಗಳನ್ನೆಲ್ಲ ಆಪೋಶನ ಪಡೆದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-36-189439844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.