ಶನಿವಾರ, ಆಗಸ್ಟ್ 13, 2022
27 °C
ಗ್ರಾಮ ಪಂಚಾಯಿತಿ ಚುನಾವಣೆ: 7ನೇ ಹೊಸಕೋಟೆಯ 2ನೇ ವಾರ್ಡ್‌ನಲ್ಲಿ ಕುತೂಹಲ

ಪತಿ, ಪತ್ನಿಯ ನಡುವೆಯೇ ಸ್ಪರ್ಧೆ!

ಸುನಿಲ್ ಎಂ.ಎಸ್ Updated:

ಅಕ್ಷರ ಗಾತ್ರ : | |

ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಜೋರಾಗಿದೆ. ಒಂದೆಡೆ ರಾಜಕೀಯ ಪಕ್ಷಗಳ ಬೆಂಬಲಿತರು ಮತ್ತು ಸ್ವತಂತ್ರ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದ್ದರೆ, ಮತ್ತೊಂದೆಡೆ ಪತಿ-ಪತ್ನಿಯ ನಡುವೆ ನೇರ ರಾಜಕೀಯ ಕದನ ಏರ್ಪಟ್ಟಿದೆ.

ಸಮೀಪದ ಏಳನೇ ಹೊಸಕೋಟೆಯ 2ನೇ ವಾರ್ಡಿನಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಗಳಾಗಿ ಕಿಶೋರ್ ಮತ್ತು ಶ್ರೀಜಾ ದಂಪತಿ ನಡುವೆಯೇ ನೇರ ಹಣಾಹಣಿ. ಇದು ಮತದಾರರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

7ನೇ ಹೊಸಕೋಟೆಯ ಕಿಶೋರ್ ಅವರು 1ನೇ ವಾರ್ಡಿನಲ್ಲಿಯೂ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮತ್ತೊಂದೆಡೆ ಪತ್ನಿ ವಿರುದ್ಧವೇ 2ನೇ ವಾರ್ಡಿನಲ್ಲಿಯೂ ಸ್ಪರ್ಧಾ ಕಣದಲ್ಲಿದ್ದಾರೆ.

ಇನ್ನೊಂದು ಕುತೂಹಲದ ಸಂಗತಿಯೆಂದರೆ, ಈ ದಂಪತಿ ಜೊತೆಯಲ್ಲಿಯೇ ಪ್ರಚಾರ ನಡೆಸುತ್ತಿದ್ದಾರೆ. ಇದರಿಂದ ಮತದಾರರಲ್ಲಿ ಗೊಂದಲವೂ ಮೂಡಿದೆ.

ಕಿಶೋರ್ ಅವರ ಗೆಳೆಯರು, ಆಪ್ತರು ಏಳನೇ ಹೊಸಕೋಟೆ-2ನೇ ವಾರ್ಡಿನಲ್ಲಿ ನಾಮಪತ್ರವನ್ನು ವಾಪಸ್‌ ತೆಗೆದುಕೊಳ್ಳುವಂತೆ ಮನವರಿಕೆ ಮಾಡಿದರೂ ಅದಕ್ಕೆ ಒಪ್ಪದ ಅವರು ಸ್ಪರ್ಧೆಗೆ ಇಳಿದಿದ್ದಾರೆ. ಅದಕ್ಕೆ ಅವರು ಸೊಪ್ಪು ಹಾಕದೇ ಕಣದಲ್ಲಿ ಉಳಿದಿದ್ದಾರೆ. ಮತದಾರರು ಯಾರನ್ನೂ ಗೆಲುವಿನ ದಡಕ್ಕೆ ಕೊಂಡೊಯ್ಯಲಿದ್ದಾರೆ ಎಂಬುದನ್ನು ನೋಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು