ಹಾರಂಗಿ‌ ಜಲಾಶಯದಿಂದ‌ 70 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

7

ಹಾರಂಗಿ‌ ಜಲಾಶಯದಿಂದ‌ 70 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

Published:
Updated:

ಮಡಿಕೇರಿ(ಕೊಡಗು​): ಕೊಡಗು ಜಿಲ್ಲೆಯಾದ್ಯಂತ‌ ಧಾರಾಕಾರ ಮಳೆ‌ ಸುರಿಯುತ್ತಿದ್ದು ಹಾರಂಗಿ‌ ಜಲಾಶಯದ‌ ಒಳಹರಿವು 65,000 ಕ್ಯುಸೆಕ್‌ಗೆ ಏರಿದ್ದು‌, ಗುರುವಾರ ಬೆಳಿಗ್ಗೆ 7.30ರಿಂದ 70,000 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. 

ಇಷ್ಟೊಂದು‌ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ದಾಖಲೆಯಾಗಿದೆ. ಗರಿಷ್ಠ 2,859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರಿಕೆ ಆಗುತ್ತಿದೆ.

ಕುಶಾಲನಗರ- ಹಾಸನ ಮಾರ್ಗದ ಕಣಿವೆ ಬಳಿ ಕಾವೇರಿ ಹಾಗೂ ಹಾರಂಗಿ ನದಿಗಳು ಉಕ್ಕಿ ಹರಿಯುತ್ತಿವೆ. ಕುಶಾಲನಗರದ ಸಾಯಿ, ಕಾವೇರಿ, ಇಂದಿರಾ ಬಡಾವಣೆಯ 100 ಮನೆಗಳಿಗೆ‌ ನೀರು ನುಗ್ಗಿದ್ದು, ನಿರಾಶ್ರಿತರಿಗೆ ಗಂಜಿಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. 

ಹಾರಂಗಿ ಜಲಾಶಯದ ಮಟ್ಟ(16.08.2018)
ಗರಿಷ್ಠ ಮಟ್ಟ 2,859 ಅಡಿ
ಇಂದಿನ ಮಟ್ಟ 2,856.63 ಅಡಿ
ಒಳ ಹರಿವು 65,000 ಕ್ಯುಸೆಕ್
ಹೊರ ಹರಿವು: 70,000 ಕ್ಯುಸೆಕ್
**
ಇದನ್ನೂ ಓದಿರಿ..
ತಮಿಳುನಾಡಿಗೆ ಪೂರ್ಣ ಹರಿದ ‘ಕಾವೇರಿ’!

ನಿಲ್ಲದ ಮಳೆ ಅಬ್ಬರ: ಕೇರಳ ತತ್ತರ

 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !