ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಹೇಮಾವತಿ ನದಿ ಸ್ವಚ್ಛತೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಹರಿವ ಹೇಮಾವತಿ ನದಿ ದಡದಲ್ಲಿ ಕಸದ ರಾಶಿ

ಶನಿವಾರಸಂತೆ: ಪಟ್ಟಣದ ಮುಖ್ಯರಸ್ತೆಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಹೇಮಾವತಿ ನದಿ ಹರಿಯುತ್ತದೆ. ಕೆಲವರು ಕಸವನ್ನು ಟ್ರ್ಯಾಕ್ಟರ್‌ನಲ್ಲಿ ತಂದು ದಡದಲ್ಲಿ ಸುರಿಯುತ್ತಿದ್ದಾರೆ. ಇದರಿಂದಾಗಿ ನೀರು ಮಲಿನವಾಗುವುದಲ್ಲದೇ, ವಾತಾವರಣಕ್ಕೂ ಮಾರಕವಾಗುತ್ತಿದೆ.

‘ಸ್ವಚ್ಛ ಭಾರತ್ ಮತ್ತು ನದಿ ಶುದ್ಧೀಕರಣದ ಕನಸು ಕೇವಲ ಸರ್ಕಾರಿ ಕಚೇರಿ ಮತ್ತು ಗ್ರಾಮ ಪಂಚಾಯಿತಿಗಳ ಗೋಡೆ ಬರಹಕಷ್ಟೇ ಸೀಮಿತವಾಗಿದೆ. ಪಟ್ಟಣದ ಕಸವನ್ನು ತಂದು ಹಾಕುವುದರಿಂದ ಹೇಮಾವತಿ ನದಿ ಮಾಲಿನ್ಯವಾಗುತ್ತಿದೆ’ ಎಂದು ಹೇಮಾವತಿ ಸಂಘಟನೆ ಅಧ್ಯಕ್ಷ ಎಚ್.ಕೆ.ರಮೇಶ್ ಹೊಸೂರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

‘ಕಸದ ರಾಶಿ ನದಿಯಲ್ಲಿ ತುಂಬಿ ಕೆಳಭಾಗದ ಗುಡುಗಳಲೆ, ಮೂದರವಳ್ಳಿ, ಬಾಗೇರಿ, ಹಂಡ್ಲಿ, ಗ್ರಾಮಗಳಲ್ಲಿ ಹರಿಯುತ್ತಿದೆ. ರೈತರು, ಜಾನುವಾರು, ಪ್ರಾಣಿ–ಪಕ್ಷಿಗಳು ಈ ಕಲುಷಿತ ನೀರನ್ನೇ ಅವಲಂಭಿಸುವ ದುಸ್ಥಿತಿ ಬಂದೊದಗಿದೆ. ಇಂಥ ನೀರಿನ ಸೇವನೆಯಿಂದ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಸಾಂಕ್ರಮಿಕ ರೋಗಗಳು ಹರಡುವ ಭೀತಿಯೂ ಎದುರಾಗಿದೆ. ಅಕ್ಕಪಕ್ಕದಲ್ಲಿ ಶಾಲಾ–ಕಾಲೇಜುಗಳಿದ್ದು, ವಿದ್ಯಾರ್ಥಿಗಳು ಕಾಯಿಲೆಯಿಂದ ಬಳಲುತ್ತಿದ್ದಾರೆ’ ಎಂದು ದೂರಿದರು.

ಕಸದ ರಾಶಿಯನ್ನು ಬೇರೆಡೆಗೆ ಸ್ಥಳಾಂತರಿಸಿ, ನದಿ ಮೂಲಗಳ ಸ್ವಚ್ಛತೆಗೆ ಆದ್ಯತೆ ನೀಡಿ ಮಾರಕ ರೋಗಗಳು ಹರಡದಂತೆ ಜನಪ್ರತಿನಿಧಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ನದಿ ಪರಿಸರವನ್ನು ಕಸದಿಂದ ಮುಕ್ತಗೊಳಿಸದಿದ್ದರೆ ಜಿಲ್ಲಾಡಳಿತದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ರಮೇಶ್ ಹೊಸೂರು, ಕರುಣ್ ಕುಮಾರ್, ಆದರ್ಶ ಮೋಹನ್, ಕಿರಣ್, ಕಾವೇರಿಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಶಶಿ, ವಿಶ್ವಾಸ್, ವಿನೋದ್ ಮತ್ತಿತರರು ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು