ವಲಯೋತ್ಸವದಿಂದ ಹವ್ಯಕ ಸಂಘಟನೆ ಭದ್ರ

7
ಮಡಿಕೇರಿಯಲ್ಲಿ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

ವಲಯೋತ್ಸವದಿಂದ ಹವ್ಯಕ ಸಂಘಟನೆ ಭದ್ರ

Published:
Updated:
Deccan Herald

ಮಡಿಕೇರಿ: ‘ವಲಯೋತ್ಸವದಂತಹ ಕಾರ್ಯಕ್ರಮಗಳಿಂದ ಹವ್ಯಕ ಸಂಘಟನೆ ಭದ್ರವಾಗಲಿದೆ. ಸಮಾಜದ ಸದಸ್ಯರನ್ನು ಒಂದೆಡೆ ಸಮೀಕರಿಸಲು ಸಾಧ್ಯವಾಗಿದೆ’ ಎಂದು ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ.ಕೃಷ್ಣಭಟ್ ಹೇಳಿದರು.

ನಗರದ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕೊಡಗು ಹವ್ಯಕ ವಲಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಳ್ಳೇರಿಯ ಮಂಡಲದಲ್ಲಿ ಮೂರು ಸಾವಿರ ಹವ್ಯಕ ಕುಟುಂಬಗಳಿದ್ದು, 12 ವಲಯಗಳನ್ನು ಒಳಗೊಂಡಿದೆ. ಕೊಡಗು ಜಿಲ್ಲೆಯಿಂದ ಕಾಸರಗೋಡು ತನಕ ಹವ್ಯಕ ಜನಾಂಗ ವಾಸಿಸುವ ಭೌಗೋಳಿಕ ವ್ಯಾಪ್ತಿ ದೊಡ್ಡದು. ಹವ್ಯಕ ಸಮಾಜದ ಗುರುಗಳ ಆಶೀರ್ವಾದದೊಂದಿಗೆ ಸಮಾಜ ಬಾಂಧವರು ಸಂಘಟನೆಯ ದೃಷ್ಟಿಯಿಂದ ವಿವಿಧ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದರು.

ಹವ್ಯಕ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮೂಲೆ ಮಾತನಾಡಿದರು. ಹವ್ಯಕ ವಲಯ ಅಧ್ಯಕ್ಷ ಕೆ.ಆರ್. ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಲಯ ನಿರ್ದೇಶಕ ಮಿತ್ತೂರು ಈಶ್ವರಭಟ್, ಮಂಡಲ ಅಶೋಕೆ ಪ್ರತಿನಿಧಿ ಎಂ.ಎನ್.ಹರೀಶ್ ಉಪಸ್ಥಿತರಿದ್ದರು.

ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. ವಿಶೇಷ ಸಾಧನೆ ಮಾಡಿದ ಪಾಲಂಗಾಲದ ಡಾ.ಸುಲೋಚನಾ ನಾರಾಯಣ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಶ್ರೀಶಂಕರಾಚಾರ್ಯರ ಛದ್ಮವೇಷ, ಹವ್ಯಕ ಪಾಕ ತಯಾರಿ, ಹವ್ಯಕ ವಸ್ತ್ರಧಾರಣೆ, ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಹವ್ಯಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಹೊಸೂರು ಶ್ರೀನಿವಾಸ ಮೂರ್ತಿ ವಲಯೋತ್ಸವ ಗೀತೆ ಹಾಡಿದರು. ವಲಯ ಕಾರ್ಯದರ್ಶಿ ಡಾ.ಎ.ಆರ್.ರಾಜಾರಾಂ ವಾರ್ಷಿಕ ವರದಿ ವಾಚಿಸಿದರು. ಈಶ್ವರಭಟ್ ವಂದಿಸಿದರು. ಕೃಷ್ಣವೇಣಿ ವೇಣುಗೋಪಾಲ್ ಮತ್ತು ಸಿ.ಎಸ್.ಸುರೇಶ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !