ಹಾಕಿ ಕೂರ್ಗ್ ಎ ಡಿವಿಜನ್:ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್, ಟಾಟಾ ಕಾಫಿ ತಂಡಕ್ಕೆ ಜಯ

7
ಟೂರ್ನಿ

ಹಾಕಿ ಕೂರ್ಗ್ ಎ ಡಿವಿಜನ್:ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್, ಟಾಟಾ ಕಾಫಿ ತಂಡಕ್ಕೆ ಜಯ

Published:
Updated:
Deccan Herald

ಗೋಣಿಕೊಪ್ಪಲು: ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಕೂರ್ಗ್ ಎ ಡಿವಿಜನ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡ ಮಲೆನಾಡು ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿತು.

ಪಂದ್ಯ ಆರಂಭಗೊಂಡ 17ನೇ ನಿಮಿಷದಲ್ಲಿ ಮಲೆನಾಡು ತಂಡದ ನೀಲ್ ಮಿಂಚಿನ ಗೋಲು ಹೊಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರಿಂದ ಬಿರುಸಿನ ಆಟಕ್ಕಿಳಿದ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡದ ಯಶವಂತ್ 37ನೇ ನಿಮಿಷದಲ್ಲಿ ಗೋಲು ಹೊಡೆದು ಸಮ ಬಲಸಾಧಿಸಿದರು.

ನಂತರದ ಎರಡೇ ನಿಮಿಷದ ಅಂತರ (39ನೇ ನಿಮಿಷ)ದಲ್ಲಿ  ತರುಣ್‌ ಉತ್ತಮ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರಿಂದ ಬೆದರಿದಂತೆ ಕಂಡು ಬಂದ ಮಲೆನಾಡು ತಂಡಕ್ಕೆ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡದ ಯಶವಂತ್ 48ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಸ್ಪೋರ್ಟ್ಸ್ ಹಾಸ್ಟೆಲ್ ತಂಡ ಕೋಣನಕಟ್ಟೆ ತಂಡವನ್ನು 3-2ಗೋಲುಗಳ ಅಂತರದಿಂದ ಸೋಲಿಸಿತ್ತು.

ಟಾಟಾ ಕಾಫಿ ತಂಡ ಡಾಲ್ಫಿನ್ ತಂಡದ ವಿರುದ್ಧ 4-0 ಗೋಲುಗಳ ಭಾರಿ ಅಂತರದಿಂದ ಜಯಸಾಧಿಸಿತು. ಪಂದ್ಯದ ಆರಂಭದಿಂದಲೂ ಬಿರುಸಿನ ಆಟಕ್ಕಿಳಿದ ಟಾಟಾ ಕಾಫಿ ತಂಡದ ಆಟಗಾರರು ಕಿರಣ್ 6 ಹಾಗೂ 55, ಶಿರಾಗ್ 10 ಹಾಗೂ 19 ನೇ ನಿಮಿಷದಲ್ಲಿ ಉತ್ತಮ ಗೋಲು ಹೊಡೆದು ತಂಡದ ಗೆಲುವಿನ ರೂವಾರಿಯಾದರು. ಗೋಲು ಗಳಿಸಲು ನಡೆಸಿದ ಡಾಲ್ಫಿನ್ ಆಟಗಾರರ ಯತ್ನವೆಲ್ಲ ಟಾಟಾ ಕಾಫಿ ತಂಡದ ಸಾಂಘಿಕ ಹೋರಾಟದ ಎದುರು ವಿಫಲವಾಗಿ ಯಾವುದೇ ಗೋಲು ಕಾಣದೆ ಸುಲಭವಾಗಿ ಸೋಲೊಪ್ಪಿಕೊಂಡಿತು.

ಎಂಆರ್‌ಎಫ್ ತಂಡ ಬಿಬಿಸಿ ತಂಡವನ್ನು 7-0 ಗೋಲುಗಳ ಭಾರಿ ಅಂತರದಿಂದ ಸೋಲಿಸಿತು. ವಿಜೇತ ತಂಡದ ಪುನೀತ್ 9, 17, ಪ್ರಜ್ವಲ್ 25, 32, 34, ಯಾಶೀರ್ 23ನೇ ನಿಮಿಷದಲ್ಲಿ ಗೋಲುಗಳಿಸಿ ತಂಡಕ್ಕೆ ಸುಲಭ ಜಯ ತಂದಿತ್ತರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !