ಮುರೇಗಾರ ಜಲಪಾತದ ಪ್ರಯಾಣ ಪ್ರಯಾಸ

7
ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರವಾಸಿ ತಾಣದ ರಸ್ತೆ

ಮುರೇಗಾರ ಜಲಪಾತದ ಪ್ರಯಾಣ ಪ್ರಯಾಸ

Published:
Updated:
ಕೆಸರು ಗದ್ದೆಯಂತಾಗಿರುವ ಮುರೇಗಾರ ಜಲಪಾತದ ರಸ್ತೆ

ಶಿರಸಿ: ಮುಂಗಾರಿನ ಹಾಡಿನೊಂದಿಗೆ ತಾಲ್ಲೂಕಿನ ಮುರೇಗಾರ ಜಲಪಾತವು ಮೈದುಂಬಿಕೊಂಡಿದೆ. ಭೋರ್ಗರೆಯುವ ಜಲಪಾತ ನೋಡಲು ಹೋಗುವವರಿಗೆ ಮಾತ್ರ ಪ್ರಯಾಣ ಪ್ರಯಾಸವಾಗಿದೆ.

ಸಾಲ್ಕಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಜಲಪಾತಕ್ಕೆ ಸಾಲ್ಕಣಿ ಕತ್ರಿಯಿಂದ 4.5 ಕಿ.ಮೀ ಒಳರಸ್ತೆಯಲ್ಲಿ ಹೋಗಬೇಕು. ಈ ರಸ್ತೆ ಸಂಪೂರ್ಣ ಚಿಂದಿಯಾಗಿದ್ದು, ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಕಾಲ್ನಡಿಗೆಯಲ್ಲಿ ಹೋಗುವವರಿಗೆ ಸಹ ಕಷ್ಟಪಟ್ಟು ಹೆಜ್ಜೆ ಇಡಬೇಕಾದ ಪರಿಸ್ಥಿತಿಯಿದೆ.

ಮುರೇಗಾರ ಜಲಪಾತ ಸಾಗುವ ರಸ್ತೆ ಕೆಸರಿನ ಗದ್ದೆಯಂತಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರು, ರಸ್ತೆಯ ದುಃಸ್ಥಿತಿ ನೋಡಿ, ವಾಪಸ್ಸಾಗುತ್ತಾರೆ. ಸೊಬಗಿನಿಂದಲೇ ಪರಿಸರ ಪ್ರೇಮಿಗಳನ್ನು ಸೆಳೆಯುವ ಜಲಪಾತವು, ರಸ್ತೆಯ ದುರವಸ್ಥೆಯಿಂದಾಗಿ, ಜನರಿಂದ ದೂರವಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ಲಕ್ಷ್ಮಣ ಗೌಡ.

ಹಲವಾರು ವರ್ಷಗಳಿಂದ ಜಿಲ್ಲಾ ಪಂಚಾಯ್ತಿ, ಜಿಲ್ಲಾಧಿಕಾರಿಗೆ ರಸ್ತೆ ನಿರ್ಮಾಣ ಮಾಡುವಂತೆ ವಿನಂತಿಸಲಾಗುತ್ತಿದೆ. ಆದರೆ, ರಸ್ತೆ ಯಥಾಸ್ಥಿತಿಯಲ್ಲಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಸಂಕಟ ಅನುಭವಿಸುವುದು ತಪ್ಪಿಲ್ಲ ಎನ್ನುತ್ತಾರೆ ಚಂದ್ರು ನಾಯ್ಕ. ಪ್ರವಾಸೋದ್ಯಮ ಇಲಾಖೆಯಿಂದ ಸೋಂದಾದಲ್ಲಿರುವ ಮಠಗಳಿಗೆ ಸಂಪರ್ಕ ರಸ್ತೆಯಾಗಿ, ಮುರೇಗಾರ ಜಲಪಾತದ ರಸ್ತೆ ನಿರ್ಮಿಸಿದರೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಅನುಕೂಲವಾಗುತ್ತದೆ ಎಂದು ಅವರು ಸಲಹೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !