ಸುಂಟಿಕೊಪ್ಪ: ಇಲ್ಲಿನ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯಿಂದ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ 59ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಸಲಾಯಿತು.
ಸೋಮವಾರ ರಾತ್ರಿ ಮಕ್ಕಳಿಗೆ ಛದ್ಮವೇಷ, ಭಕ್ತಿಗೀತೆ, ಭಾವಗೀತೆ, ಆಟೋಟ ಸ್ಪರ್ಧೆ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಸಲಾಯಿತು.
ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಛದ್ಮವೇಷ, ಭಕ್ತಿಗೀತೆ, ಭಾವಗೀತೆ, ಆಟೋಟ ಸ್ಪರ್ಧೆ ರಂಜಿಸಿದವು ಮಕ್ಕಳು ಛದ್ಮವೇಷಗಳಲ್ಲಿ ದೇವಾನು ದೇವತೆ ವೇಷದಲ್ಲಿ ಕಂಗೊಳಿಸಿದರು. ಅಲ್ಲದೇ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿ, ಜನಮನ ಗೆದ್ದರು.
ಮಂಗಳವಾರ ರಾತ್ರಿ ರಾಮಮಂದಿರದಲ್ಲಿ ರಂಗಪೂಜೆ ನಡೆಯಿತು.
ವಿಸರ್ಜನೋತ್ಸವ ಇಂದು: ಕಳೆದ 9 ದಿನಗಳಿಂದ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಯ ವಿಸರ್ಜನೆ ಶೋಭಾಯಾತ್ರೆಯು ಬುಧವಾರ ಸಂಜೆ 3 ಗಂಟೆಗೆ ರಾಮಮಂದಿರದಿಂದ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿ ಗದ್ದೆಹಳ್ಳದ ಯಂಕನ ಉಲ್ಲಾಸ್ ಮತ್ತು ಯಂಕನ ಕರುಂಬಯ್ಯ ಕುಟುಂಬಸ್ಥರ ಕೆರೆಯಲ್ಲಿ ವಿಸರ್ಜಿಲಾಗುವುದು.