ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಭಾಷೆ ಅಕಾಡೆಮಿಯಲ್ಲಿ ಆಗದ ಕೆಲಸ; ಆರೋಪ

Last Updated 12 ಜೂನ್ 2022, 4:52 IST
ಅಕ್ಷರ ಗಾತ್ರ

ಮಡಿಕೇರಿ: ಅರೆಭಾಷೆ ಅಕಾಡೆಮಿಯಲ್ಲಿ ನಿರೀಕ್ಷಿಸಿದಷ್ಟು ಕೆಲಸಗಳು ಆಗುತ್ತಿಲ್ಲ. ಹೀಗಾಗಿ, ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದುಲೇಖಕ ಎ.ಕೆ.ಹಿಮಕರ ಒತ್ತಾಯಿಸಿದರು.

ಕಳೆದ 2 ವರ್ಷಗಳಿಂದ ಒಂದೂ ಪುಸ್ತಕವೂ ಪ್ರಕಟಗೊಂಡಿಲ್ಲ. ಫೆಲೊಶಿಪ್ ನೀಡಿದ್ದ 10 ಸಂಶೋಧಕರ ಗ್ರಂಥಗಳನ್ನು ಪ್ರಕಟಿಸಿಲ್ಲ. ಕೂಡಲೇ ಈ ಗ್ರಂಥಗಳನ್ನು ಪ್ರಕಟಿಸಬೇಕು ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಅರೆಭಾಷೆ ಪದಕೋಶ ಹಾಗೂ ವಿಶ್ವಕೋಶದ ರಚನೆಯ ಯೋಜನೆಯೂ ನಿರೀಕ್ಷಿತ ಪ್ರಮಾಣದಲ್ಲಿ ಸಾಗುತ್ತಿಲ್ಲ. ಸರ್ಕಾರ ಕೂಡಲೇ ಈ ಕುರಿತು ತನಿಖೆ ನಡೆಸಬೇಕು ಹಾಗೂ ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಲೇಖಕರಾದ ಕೆ.ಆರ್.ತೇಜಕುಮಾರ್, ಕೆ.ಆರ್.ವಿದ್ಯಾಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT