ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲ್ಸ್’ನಲ್ಲಿ ಬೃಹತ್ ಮ್ಯಾರಥಾನ್; 1,200 ಮಂದಿ ಭಾಗಿ

ವಿವಿಧ ರಾಜ್ಯಗಳಿಂದ ಬಂದಿದ್ದ ಕ್ರೀಡಾಪಟುಗಳು
Last Updated 19 ಸೆಪ್ಟೆಂಬರ್ 2022, 15:14 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿನ ‘ಕಾಲ್ಸ್’ ಶಾಲೆಯಲ್ಲಿ ಭಾನುವಾರ ನಡೆದ ರಾಷ್ಟ್ರಮಟ್ಟದ ಬೃಹತ್ ಮ್ಯಾರಥಾನ್‌ನಲ್ಲಿ 1,200 ಮಂದಿ ಭಾಗವಹಿಸಿದ್ದರು. ಬಾಲಕರು, ಯುವಕರು ಮತ್ತು ವಯಸ್ಕರು ಎಂಬ ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಮುಂಬೈ, ಚೆನ್ನೈ, ಕಣ್ಣೂರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

50 ಕಿಮೀ, 25 ಕಿಮೀ, 12.5 ಕಿಮೀ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಓಟಗಾರರು ದಣಿವರಿಯದೆ ಓಡಿದರು. ಕಾಲ್ಸ್ ಶಾಲೆಯಿಂದ ಕಾಫಿ ತೋಟದ ಮಾರ್ಗವಾದ ಕಳತ್ಮಾಡು, ಪಾಲಿಬೆಟ್ಟ, ಅಮ್ಮತ್ತಿ ರಸ್ತೆಯಲ್ಲಿ ಓಡಿ ಮತ್ತೆ ಮರಳಿ ಕಾಲ್ಸ್ ಶಾಲೆ ಸೇರಿದರು.

ಶಾಸಕ ಕೆ.ಜಿ.ಬೋಪಯ್ಯ ಅವರು ಮ್ಯಾರಥಾನ್ ಸ್ಪರ್ಧೆ ಉದ್ಘಾಟಿಸಿ, ‘ಉತ್ತಮ ಆರೋಗ್ಯದ ಜತೆಗೆ ಭಾವೈಕ್ಯತೆ ಬಿತ್ತುವಲ್ಲಿ ಕ್ರೀಡಾಕೂಟಗಳು ಸಹಕಾರಿಯಾಗಲಿವೆ. ರಾಷ್ಟ್ರಮಟ್ಟದ ಓಟದ ಸ್ಪರ್ಧಿಗಳನ್ನು ಕೊಡಗಿಗೆ ಬರುವಂತೆ ಮಾಡಿರುವ ಕಾಲ್ಸ್ ಶಾಲೆಯ ಹಿರಿಮೆ ದೊಡ್ಡದು’ ಎಂದು ಶ್ಲಾಘಿಸಿದರು.

ಕಾಲ್ಸ್ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ದತ್ತ ಕರುಂಬಯ್ಯ, ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಒಲಂಪಿಯನ್ ಓಟಗಾರ್ತಿ ಅಶ್ವಿನಿ ನಾಚಪ್ಪ ಹಾಜರಿದ್ದರು.

ಫಲಿತಾಂಶ:

50 ಕಿ.ಮೀ ವಿಭಾಗ

ಪುರುಷರು: ಸುಗೌರವ್ ಗೋಸ್ವಾನ್ (ಪ್ರ), ವಿನಯ ಮರಾಳು (ದ್ವಿ), ಗಿರೀಶ್ ಹಿರಿಯಣ್ಣ (ತೃ)

ಮಹಿಳೆಯರು: ಮೇವಿಶ್ ಹುಸೇನ್ (ಪ್ರ), ಸುಚಿತ್ರಾ ಪಟ್ಟವರ್ಧನ್ (ದ್ವಿ), ಜಾಹ್ನವಿ ಗೌಡ (ತೃ)

25 ಕಿ.ಮೀ ವಿಭಾಗ

ಪುರುಷರು: ಎಸ್.ಲಕ್ಷ್ಮಣ (ಪ್ರ), ಕೆ.ಪಿ.ಬಿದ್ದಪ್ಪ (ದ್ವಿ), ನವೀನ್ ನಾಗಪಾಲ್ (ತೃ)

ಮಹಿಳೆಯರು: ದಿವ್ಯಾ ರಾವತ್ (ಪ್ರ), ಯು.ಎನ್.ಅರ್ಚನಾ (ದ್ವಿ), ಅಶ್ವಿನಿ ರಾಯ್ (ತೃ)

12.5 ಕಿ.ಮೀ ವಿಭಾಗ

ಪುರುಷರು: ವಿಘ್ನೇಶ್ (ಪ್ರ), ಮಂದಣ್ಣ (ದ್ವಿ), ಪಿ.ಯು.ಹರ್ಷ (ತೃ)

ಮಹಿಳೆಯರು: ಕೆ.ಟಿ.ಚೊಂಡಮ್ಮ (ಪ್ರ), ರೋಷಿಕಾ ಚಂಗಪ್ಪ (ದ್ವಿ), ಕೆ.ಸಿ.ಶ್ರೀ (ತೃ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT