ಈ ಕುರಿತು ‘ಪ್ರಜಾವಾಣಿ’ ಬಾಲಮಂದಿರದ ಸಿಬ್ಬಂದಿ ಸೂರಜ್ ಅವರನ್ನು ಸಂಪರ್ಕಿಸಿದಾಗ ಅವರು, ‘ಕಳೆದ 2 ವರ್ಷಗಳ ಹಿಂದೆ ಈ ನಾಯಿ ಗಾಯಗೊಂಡ ಸ್ಥಿತಿಯಲ್ಲಿ ಬಾಲಮಂದಿರದ ಆವರಣಕ್ಕೆ ಬಂದಿತ್ತು. ಆಗ ಮಕ್ಕಳು ಆಹಾರ ನೀಡಿ ಆರೈಕೆ ಮಾಡಿದರು. ಅಂದಿನಿಂದ ಮಕ್ಕಳ ಜೊತೆಗೆ ಶಾಲೆಗೆ ಹೋಗಿ ಮತ್ತೆ ವಾಪಸ್ ಬಾಲಮಂದಿರಕ್ಕೆ ಬರುತ್ತಿದೆ. ಟಾಮಿ ಎಂದು ಮಕ್ಕಳು ಹೆಸರಿಟ್ಟಿದ್ದಾರೆ. ಈಗಲೂ ಮಕ್ಕಳ ಜೊತೆಯೆ ಕೋಟೆ ಆವರಣಕ್ಕೆ ಬಂದಿತ್ತು’ ಎಂದು ಹೇಳಿದರು.