‘ಪ್ರಕೃತಿ ವಿಕೋಪದ ವಾಸ್ತವ, ಮುಂದಿನ ಹೆಜ್ಜೆ’: 13ರಂದು ಸಂವಾದ

7

‘ಪ್ರಕೃತಿ ವಿಕೋಪದ ವಾಸ್ತವ, ಮುಂದಿನ ಹೆಜ್ಜೆ’: 13ರಂದು ಸಂವಾದ

Published:
Updated:

ಮಡಿಕೇರಿ: ಸಮಾನ ಮನಸ್ಕರ ವೇದಿಕೆ ವತಿಯಿಂದ ಇದೇ 13ರಂದು ನಗರದ ಬಾಲ ಭವನದಲ್ಲಿ ‘ಪ್ರಕೃತಿ ವಿಕೋಪದ ವಾಸ್ತವಗಳು ಮತ್ತು ಮುಂದಿನ ಹೆಜ್ಜೆಗಳು’ ವಿಷಯದ ಕುರಿತು ಸಂವಾದ ಆಯೋಜಿಸಲಾಗಿದೆ ಎಂದು ವೇದಿಕೆ ಸಂಚಾಲಕ ನಂದಾ ಸುಬ್ಬಯ್ಯ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ, 'ಪ್ರಕೃತಿ ವಿಕೋಪದ ಬಗ್ಗೆ ಹಲವಾರು ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ನೈಸರ್ಗಿಕವಾಗಿ ವಿಕೋಪ ನಡೆದಿದೆಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು ನಿಸರ್ಗದೊಂದಿಗೆ ಮಾನವ ನಡೆಸಿದ ಹಸ್ತಕ್ಷೇಪವೇ ಕಾರಣವೆಂದು ಹೇಳುತ್ತಿದ್ದಾರೆ. ದುರಂತಕ್ಕೆ ನಿಜವಾದ ಕಾರಣ ಹಾಗೂ ಇದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ತಿಳಿಯಲು ಭೂಗರ್ಭ ಶಾಸ್ತ್ರಜ್ಞ ಐಚೆಟ್ಟಿರ ಮಾಚಯ್ಯ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಸೋಮವಾರ ಮತ್ತಿಗೋಡು ಆನೆಕ್ಯಾಂಪ್ ರಸ್ತೆಯಲ್ಲಿ ‘ರಂಗ’ ಎಂಬ ಸಾಕಾನೆ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ದುಬಾರೆಯಲ್ಲಿ 29 ಆನೆಗಳಿವೆ. ಪ್ರತಿದಿನ ಬೆಳಿಗ್ಗೆ ಆನೆಗಳ ವಯಸ್ಸು ಹಾಗೂ ತೂಕದ ಆಧಾರದಲ್ಲಿ ಉಪಾಹಾರ ನೀಡಿ ಬಳಿಕ ಕಾಡಿಗೆ ಮೇಯಲು ಬಿಡಲಾಗುತ್ತದೆ. ಮತ್ತಿಗೋಡು ಆನೆಕ್ಯಾಂಪ್‌ನಲ್ಲೂ ಇದೇ ರೀತಿಯ ವ್ಯವಸ್ಥೆಯಿದೆ. ಆದರೆ, ರಾತ್ರಿ 2ರ ಸಮಯದಲ್ಲಿ ಆನೆಯನ್ನು ತಿರುಗಾಡಲು ಬಿಟ್ಟವರಾರು ಎಂದು ನಂದಾ ಸುಬ್ಬಯ್ಯ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಕೆ. ಅಬ್ದುಲ್ಲಾ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !