ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪ್ಪಚ್ಚಕವಿ ನೆನಪಿನ ‘ಕೊಡವ ಕವನ ಮೊತ್ತೆ’ ಗೆ ಕವನಗಳ ಆಹ್ವಾನ

Published : 22 ಆಗಸ್ಟ್ 2024, 5:26 IST
Last Updated : 22 ಆಗಸ್ಟ್ 2024, 5:26 IST
ಫಾಲೋ ಮಾಡಿ
Comments

ಮಡಿಕೇರಿ: ಕೊಡಗಿನ ಆದಿಕವಿ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳ 157 ಜನ್ಮದಿನ ಸೆಪ್ಟೆಂಬರ್ 21ರಂದು ನಡೆಯಲಿದೆ. ಇದರ ಪ್ರಯುಕ್ತ ಅಪ್ಪಚ್ಚ ಕವಿಗಳ ಜನ್ಮೋತ್ಸವವನ್ನು ‘ಕೊಡವ ಸಾಹಿತ್ಯ ನಾಳ್’ ಹೆಸರಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಚರಿಸಲು ತೀರ್ಮಾನಿಸಿದೆ.

ಇದರ ಅಂಗವಾಗಿ ಹೊರ ತರಲಾಗುವ ಕವನ ಸಂಕಲನ ‘ಕೊಡವ ಕವನ ಮೊತ್ತೆ’ ಗೆ 157 ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ.

ಯಾವುದೇ ಜಾತಿ- ಮತ- ಭೇದವಿಲ್ಲದೇ ಕೊಡವ ಭಾಷೆಯಲ್ಲಿ ಕವನಗಳನ್ನು ಆಹ್ವಾನಿಸಲಾಗಿದೆ. 20 ಸಾಲುಗಳಿಗೆ ಮೀರದ, ಪ್ರತಿ ಸಾಲುಗಳೂ 6-7 ಶಬ್ಧಗಳಿಗೆ ಸೀಮಿತವಾಗಿರುವ, ನಾಡು-ನುಡಿ, ಸಾಮರಸ್ಯ, ಸಹಬಾಳ್ವೆ, ಪ್ರಕೃತಿ, ಆಧುನಿಕತೆ, ಇತಿಹಾಸ, ಪುರಾಣಕ್ಕೆ ಸಂಬಂಧಿತವಾಗಿರುವ, ಯಾರದ್ದು ಭಾವನೆಗಳಿಗೆ, ಮತ- ಧರ್ಮಗಳಿಗೆ ಘಾಸಿ ಉಂಟು ಮಾಡದಿರುವ ಕವನಗಳನ್ನು ಕಳುಹಿಸಿಕೊಡಬಹುದು.

ಅಕಾಡೆಮಿ ಕಚೇರಿಗೆ ಕವನ ತಲುಪಿಸಲು ಸೆ. 10 ಕೊನೆಯ ದಿನ. ಒಬ್ಬರು ಒಂದೇ ಕವನವನ್ನು ಕಳುಹಿಸಬೇಕು. ಅಕಾಡೆಮಿ ಗೊತ್ತುಪಡಿಸಿದಂತೆ ಪ್ರಕಟಿತ ಕವನಗಳಿಗೆ ಸಂಭಾವನೆ ನೀಡಲಾಗುತ್ತದೆ. ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರ ಹಾಗೂ ಬ್ಯಾಂಕ್ ಪಾಸ್‍ ಪುಸ್ತಕದ ಪ್ರತಿಯೊಂದಿಗೆ ಕವನವನ್ನು ಕಳುಹಿಸಿಕೊಡಬೇಕು ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹಾಗೂ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ.ಗಿರೀಶ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಳಾಸ: ಅಧ್ಯಕ್ಷರು/ ರಿಜಿಸ್ಟ್ರಾರ್ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಡ್ಸ್ ಭವನ, ಮ್ಯಾನ್ಸ್ ಕಾಂಪೌಂಡ್ ಮಡಿಕೇರಿ-571201.  ವಾಟ್ಸ್‌ಆ‍್ಯಪ್ ಸಂಖ್ಯೆ: 8105341332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT