ಮಡಿಕೇರಿಯಲ್ಲಿ ಮಾವ, ಪತ್ನಿಯ ಕೊಲೆಗೆ ಯತ್ನಿಸಿದ ಆರೋಪಿಗೆ 7 ವರ್ಷ ಜೈಲು ಶಿಕ್ಷೆ

7

ಮಡಿಕೇರಿಯಲ್ಲಿ ಮಾವ, ಪತ್ನಿಯ ಕೊಲೆಗೆ ಯತ್ನಿಸಿದ ಆರೋಪಿಗೆ 7 ವರ್ಷ ಜೈಲು ಶಿಕ್ಷೆ

Published:
Updated:

ಮಡಿಕೇರಿ: ಮಾವ ಹಾಗೂ ಪತ್ನಿಯನ್ನೇ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದ ಅಪರಾಧಿಗೆ ಇಲ್ಲಿನ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಶನಿವಾರ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಮಕ್ಕಂದೂರು ತಂತಿಪಾಲ ಗ್ರಾಮದ ದಿವಂಗತ ದೇವಯ್ಯ ಅವರ ಪುತ್ರ ಮಡ್ಲಂಡ ನಾಣಯ್ಯ ಶಿಕ್ಷೆಗೆ ಒಳಗಾದ ವ್ಯಕ್ತಿ.

ಆತ, ತನ್ನ ಪತ್ನಿ ಅನಿತಾ ಹಾಗೂ ಆಕೆಯ ತಂದೆ ಸುಬ್ಬಯ್ಯ ಅವರನ್ನು ಕೊಲೆ ಮಾಡಲು ಯತ್ನಿಸಿದ್ದ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ 2016ರ ಮೇ 20ರಂದು ಪ್ರಕರಣ ದಾಖಲಾಗಿತ್ತು. ವಾದ– ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿ.ವಿ. ಮಲ್ಲಾಪುರ್‌ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.

ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದ ಅಪರಾಧಕ್ಕೆ 7 ವರ್ಷಗಳ ಜೈಲು ಶಿಕ್ಷೆ, ₹ 10 ಸಾವಿರ ದಂಡ, ಗುಂಡು ಹಾರಿಸಿ ತೀವ್ರ ಗಾಯ ಉಂಟು ಮಾಡಿದ್ದಕ್ಕೆ 4 ವರ್ಷ ಸಜೆ, ₹ 10 ಸಾವಿರ ದಂಡ, ಅಕ್ರಮವಾಗಿ ಕೋವಿ ಬಳಸಿ ಕೃತ್ಯ ಎಸಗಿದ್ದಕ್ಕೆ 1 ವರ್ಷ ಜೈಲು, ₹ 5 ಸಾವಿರ ದಂಡ ವಿಧಿಸಿ, ನ್ಯಾಯಾಧೀಶರು ಆದೇಶಿಸಿದ್ದಾರೆ.

ದಂಡದ ಮೊತ್ತದಲ್ಲಿ ₹ 20 ಸಾವಿರವನ್ನು ಗಾಯಾಳು ಸುಬ್ಬಯ್ಯಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರಿ ವಕೀಲರಾಗಿ ಎಂ. ಕೃಷ್ಣವೇಣಿ ವಾದಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !