ಮಡಿಕೇರಿಯಲ್ಲಿ ಕಾರ್ಮಿಕರ ಜೈಲ್‌ ಭರೋ ಚಳವಳಿ

7
ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಸಿಐಟಿಯು ಒತ್ತಾಯ

ಮಡಿಕೇರಿಯಲ್ಲಿ ಕಾರ್ಮಿಕರ ಜೈಲ್‌ ಭರೋ ಚಳವಳಿ

Published:
Updated:
Deccan Herald

ಮಡಿಕೇರಿ: ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್‌ (ಸಿಐಟಿಯು) ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಗುರುವಾರ ರೈತ, ಕಾರ್ಮಿಕರ ಜೈಲ್‌ ಭರೋ ಚಳವಳಿ ನಡೆಯಿತು.

ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಜಂಟಿ ಕಾರ್ಯದರ್ಶಿ ಪಿ.ಆರ್. ಭರತ್ ಮಾತನಾಡಿ, ‘ಎನ್‌ಡಿಎ ಸರ್ಕಾರವು ಕಳೆದ 4 ವರ್ಷಗಳಲ್ಲಿ ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳಿಂದ ಶ್ರೀಮಂತರಿಗೆ ಮಾತ್ರ ಲಾಭವಾಗಿದೆಯೇ ಹೊರತು ಕಾರ್ಮಿಕ ವರ್ಗಕ್ಕೆ ಯಾವುದೇ ಅನುಕೂಲವಾಗಿಲ್ಲ. ನೈಜ್ಯ ಸ್ವಾತಂತ್ರ್ಯಕ್ಕಾಗಿ ಸಂಘಟನೆ ವತಿಯಿಂದ ಜಿಲ್ಲೆಯ ಕಾರ್ಮಿಕರು ಒಂದೆಡೆ ಸೇರಿ ಸಾಮೂಹಿಕ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

‘ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿ ಮಾಡಲು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
7ನೇ ವೇತನ ಆಯೋಗದ ಅಡಿ ವೇತನ ತಾರತಮ್ಯ ಅನುಸರಿಸಿದೆ. ಗ್ರಾಮ ಪಂಚಾಯಿತಿ ನೌಕರರು ಸೇರಿದಂತೆ ರಾಜ್ಯದ ಎಲ್ಲಾ ನೌಕರರಿಗೂ ₹18 ಸಾವಿರ ಕನಿಷ್ಠ ನಿಗದಿಪಡಿಸಬೇಕು. ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿ 10 ವರ್ಷ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್‌ಗಳಿಗೆ ಕಾರ್ಯದರ್ಶಿ ಹುದ್ದೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಅಧ್ಯಕ್ಷ ಅಧ್ಯಕ್ಷ ಈ.ರಾ. ದುರ್ಗಾಪ್ರಸಾದ್ ಮಾತನಾಡಿ, ‘ಸಾಲ ಪಡೆದ ರೈತರು, ಕೂಲಿಕಾರರ, ದಲಿತರ, ಆದಿವಾಸಿಗಳ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡಬೇಕು. ರೈತರ ಸಾಲ ಋಣಮುಕ್ತ ಕಾಯ್ದೆಯನ್ನು ದೇಶವ್ಯಾಪಿ ಜಾರಿಗೆ ಬರುವಂತೆ ಅಂಗೀಕರಿಸಬೇಕು. ರೈತರಿಗೆ ಬೆಂಬಲ ಬೆಲೆ ದೊರೆಯಬೇಕು. ಕೃಷಿ, ಹೈನುಗಾರಿಕೆ, ಪಶುಪಾಲನೆಗೆ ಅಗತ್ಯ ನೆರವು ಯೋಜನೆ ರೂಪಿಸಬೇಕು’ ಎಂದು ಆಗ್ರಹಿಸಿದರು.

ವ್ಯವಸಾಯ ಮಾಡಲು ಇಚ್ಛಿಸುವವರಿಗೆ 5 ಎಕರೆ ಜಮೀನು ನೀಡಿ ಪರಿಶಿಷ್ಟ ಮತ್ತು ಇತರ ಜನಸಂಖ್ಯೆಗೆ ಅನುಗುಣವಾದ ಅನುದಾನದಲ್ಲಿ ಶೇ 30ರಷ್ಟು ಮೀಸಲಿಡಬೇಕು. ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸಿದ ಜಮೀನನ್ನು ವಾಪಸ್‌ ಪಡೆದು ಬಡವರಿಗೆ ಹಂಚಬೇಕು. ಉದ್ಯೋಗ ಖಾತ್ರಿ ಕೆಲಸವನ್ನು ಕಡ್ಡಾಯವಾಗಿ 100 ದಿನಗಳ ಕಾಲ ನೀಡಬೇಕು. ಉದ್ಯೋಗ ಪಡೆಯಲಾಗದ ಕುಟುಂಬಕ್ಕೆ ಕಡ್ಡಾಯವಾಗಿ ನಿರುದ್ಯೋಗ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಜೈಲ್ ಭರೋ ಚಳವಳಿಯಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎ. ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಬಿ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !