ಸೋಮವಾರಪೇಟೆ: ಮಹಿಳಾ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಜೇಸಿ ಸಂಸ್ಥೆ ಮಾಡುತ್ತಿದೆ ಎಂದು ಜೇಸಿ ವಲಯ ನಿರ್ದೇಶಕಿ ರಮ್ಯ ಸಂತೋಷ್ ತಿಳಿಸಿದರು.

ಇಲ್ಲಿನ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉತ್ಸಾಹಿ ಜನರಲ್ಲಿನ ಪ್ರತಿಭೆ ಗುರುತಿಸುವ ಮೂಲಕ ಹತ್ತು ಹಲವು ಅವಕಾಶಗಳನ್ನು ನೀಡುತ್ತಾ ಬಂದಿದೆ. ಇಂದಿಗೂ ಹೆಚ್ಚಿನ ಮಹಿಳೆಯರು ತಮ್ಮಲ್ಲಿ ಅಡಗಿರುವ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲರಾಗಿದ್ದಾರೆ. ಅಂತಹ ಮಹಿಳೆಯರು ಜೇಸಿಯಲ್ಲಿ ಸದಸ್ಯತ್ವ ಪಡೆಯುವುದರೊಂದಿಗೆ, ಹೆಚ್ಚು ಹೆಚ್ಚು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಮಹಿಳಾ ಸಮಾಜದ ನಿರ್ದೇಶಕಿ ಜಲಜಾ ಶೇಖರ್ ಮಾತನಾಡಿ, ಭಾರತದಲ್ಲಿ ಮಹಿಳೆಯರು ಶಿಕ್ಷಣದಿಂದ ವಂಚಿತಾಗಿದ್ದ ಸಂದರ್ಭ ಬ್ರಿಟಿಷರು ಇಲ್ಲಿಗೆ ಬಂದು ಆಡಳಿತ ನಡೆಸುವ ಸಂದರ್ಭ, ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಆಗ ಸಮಾಜದಲ್ಲಿ ಮಹಿಳಾ ಸಬಲೀಕರಬ ಪ್ರಾರಂಭ ಆಯಿತು. ಪ್ರಪಂಚದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆ ಕಾಣಬಹುದು. ಅವರ ಸಾಧನೆಗೆ ಪುರುಷರು ಸಾಥ್ ನೀಡುತ್ತಿದ್ದಾರೆ. ಇಂದು ಮಾರುಕಟ್ಟೆಯಲ್ಲಿ ಮಹಿಳೆಯರು ಜಾಹೀರಾತಿನ ಸರಕಾಗಿರುವುದು ದುರಂತಃ. ನಾವು ಪುರುಷರಂತೆಯೇ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.

ಯಾವುದೇ ಸಾಧನೆಯ ಹಿಂದೆ ಸಂಸ್ಕೃತಿ ಮತ್ತು ಸಂಸ್ಕಾರ ಬೇಕಿದೆ. ಇಂದು ಸಾಧನೆಯ ಹೆಸರಿನಲ್ಲಿ ಸಾಕಷ್ಟು ಅನಾಹುತಗಳು ನಡೆಯುತ್ತಿವೆ. ಸಮಯ ಸಂದರ್ಭಗಳಲ್ಲಿ ನಮಗೆ ನಾವೇ ಲಕ್ಷ್ಮಣ ರೇಖೆ ಹಾಕಿಕೊಂಡು ಕೆಲಸ ಮಾಡಬೇಕು. ಹೊಂದಾಣಿಕೆ ಜೀವನದಿಂದ ಮಾತ್ರ ಸುಖಿ ಜೀವನಸಾಧ್ಯ. ಮೊಬೈಲ್ ಫೋನ್ ಸಂಸ್ಕೃತಿ, ಟಿವಿ ಸೀರಿಯಲ್ ಬಿಟ್ಟು ಪುಸ್ತಕ ಹಿಡಿಯುವುದರೊಂದಿಗೆ ಮಕ್ಕಳಿಗೆ ಮಾದರಿಯಾಗಿ ಸಂಸ್ಕಾರ ಜೀವನ ಕಲಿಸುವ ಕೆಲಸ ಮಾಡಬೇಕಿದೆ ಎಂದರು.

ಸಾಯಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಎಂ.ಕೆ. ಹಿಮಾನಿ ಮಾತನಾಡಿ, ಪುರುಷರಂತೆಯೇ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಅನೇಕ ಸಾಧನೆಗಳನ್ನು ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕಿದೆ ಎಂದರು.

ಜೇಸಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಜಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಸಿಂಚನ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.