ಮಡಿಕೇರಿ: ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ದೇವಾಲಯವು ಯಾವುದೇ ಒಂದು ಜನಾಂಗದ ದೇವಾಲಯವಲ್ಲ. ಅದು ಎಲ್ಲರ ದೇವಾಲಯ ಎಂದು ಬಿಲ್ಲವ ಸಂಘದ ಸದಸ್ಯ ರಘು ರಾಜ್ಕುಮಾರ್ ತಿಳಿಸಿದರು.

ಈಚೆಗೆ ಕಟ್ಟೆಮಾಡು ಗ್ರಾಮದಲ್ಲಿ ನಡೆದ ಘಟನೆಯಿಂದ ಉತ್ಸವಕ್ಕೆ ಭಂಗವಾಗಿದೆ. ಗ್ರಾಮದ ಜನರಿಗೆ ಬೇಸರ ತರಿಸಿದೆ. ಇನ್ನಾದರೂ, ದೇವಸ್ಥಾನದ ವಿಚಾರದಲ್ಲಿ ಯಾವುದೇ ಜಾತಿ, ಭೇದ ಮಾಡದೇ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ದೇವಸ್ಥಾನದ ಅಭಿವೃದ್ಧಿಗೆ ಎಲ್ಲಾ ಜನಾಂಗದವರು ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗೆ ಆಸ್ಪದ ನೀಡದೇ, ಎಲ್ಲರು ಒಗ್ಗಟ್ಟಿನಿಂದ ಇರಬೇಕು ಎಂದರು.

ಗ್ರಾಮಸ್ಥರು ಹಾಗೂ ಸಂಘದ ಸದಸ್ಯ ರಂಜುಮಹೇಶ್ ಮಾತನಾಡಿ, ‘ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತಿದ್ದರೂ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಭೇಟಿ ನೀಡುತ್ತಿಲ್ಲ. ದೇವಾಲಯ ಸಮಿತಿ ಸಭೆ ನಡೆಸಲಾಗುತ್ತಿಲ್ಲ. ಮತ್ತೊಮ್ಮೆ ಜಿಲ್ಲಾಡಳಿತ ಬಳಿ ತೆರಳಿ ಸಮಾಲೋಚನೆ ನಡೆಸಿದ ಸಂದರ್ಭ ದೇವಾಲಯದ ಸಮಿತಿಯವರು ಮಾತ್ರ ಸಭೆ ನಡೆಸಿ ತೀರ್ಮಾನ ತಿಳಿಸುವಂತೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸಂಘದ ಸದಸ್ಯರಾದ ಬಿ.ಪಿ.ಬಾಲಕೃಷ್ಣ, ಬಿ.ಬಿ.ಭರತ್ ಕುಮಾರ್, ಬಿ.ಸಿ.ಯತೀನ್, ಧನಂಜಯ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.