ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಲಗ್ಗೆ: ಗರಿಗೆದರಿದ ಪ್ರವಾಸೋದ್ಯಮ

Last Updated 27 ಸೆಪ್ಟೆಂಬರ್ 2020, 15:13 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಸಮೀಪದ ಪ್ರವಾಸಿ ಕೇಂದ್ರ ಕಾವೇರಿ ನಿಸರ್ಗಧಾಮದಲ್ಲಿ ಪ್ರವಾಸಿಗರ ಕಲರವ ಕೇಳಿಬರುತ್ತಿದೆ.

ದಸರಾ ಸಮೀಪಿಸುತ್ತಿದ್ದಂತೆ ಕೋವಿಡ್-19ರ ಮಧ್ಯೆ ಪ್ರವಾಸಿಗರು ಮಾಸ್ಕ್ ಧರಿಸಿಕೊಂಡು ಕಾವೇರಿ ನಿಸರ್ಗಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾನುವಾರ ಆಗಮಿಸಿ ಸಂಭ್ರಮಿಸಿದರು.

ಕಾವೇರಿಯ ನದಿಯ ತೂಗುಸೇತುವೆ ಮೇಲೆ ಸಂಚರಿಸಿ ಸಂತಸಪಟ್ಟರು. ನಿಸರ್ಗಧಾಮಕ್ಕೆ ಕೋವಿಡ್ ನಂತರ ಇದೇ ಮೊದಲ ಬಾರಿ ಇಷ್ಟು ಪ್ರಮಾಣದ ಪ್ರವಾಸಿಗರು ಭೇಟಿ ನೀಡಿರುವುದು ಕಂಡುಬಂದಿದೆ.

ಇದರಿಂದ ಬಿಕೊ ಎನ್ನುತ್ತಿದ್ದ ಪ್ರವಾಸಿ ಕೇಂದ್ರಗಳಿಗೆ ಜೀವಕಳೆ ಬಂದಿದ್ದು, ಪ್ರವಾಸೋದ್ಯಮ ಗರಿಗೆದರಿದೆ. ಭಾನುವಾರ ನಿಸರ್ಗಧಾಮಕ್ಕೆ 600ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ಕಳೆದ ವಾರಕ್ಕೆ ಹೋಲಿಸಿದರೆ ಈ ದಿನ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ. ನಂಜರಾಯಪಟ್ಟಣ ಸಮೀಪದ ದುಬಾರೆ ಸಾಕಾನೆ ಶಿಬಿರ ಹಾಗೂ ಬೈಲುಕುಪ್ಪೆಯ ಟೆಬೆಟನ್‌ನ ಗೋಲ್ಡನ್ ಟೆಂಪಲ್‌ಗೂ ಕೂಡ ಪ್ರವಾಸಿಗರ ಪ್ರವೇಶ ಇನ್ನೂ ಆರಂಭಗೊಂಡಿಲ್ಲ.

ಕೊಡಗು ಜಿಲ್ಲೆಗೆ ಕಳೆದವಾರಕ್ಕೆ ಹೋಲಿಸಿದರೆ ಈ ವಾರ ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT