ಚನ್ನಮ್ಮನ ಕಿತ್ತೂರು: ‘ಪಟ್ಟಣದ ಗುರುವಾರ ಪೇಟೆ ವಿಸ್ತರಣೆ ಮಾಡಿ ಅಂದಗೊಳಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲ ಹೆಚ್ಚಿಸಲಾಗಿದೆ. ಅದರಂತೆ ಸೋಮವಾರ ಪೇಟೆಯಿಂದ ನಿಚ್ಚಣಕಿ ಹಾಗೂ ಗೊಂಬಿಗುಡಿಯಿಂದ ಡೊಂಬರಕೊಪ್ಪ ನಿರೀಕ್ಷಣಾ ಮಂದಿರದವರೆಗೆ ರಸ್ತೆ ವಿಸ್ತರಣೆಯನ್ನು ಶಾಸಕ ಬಾಬಾಸಾಹೇಬ ಪಾಟೀಲ ಅವರು ಕೈಗೆತ್ತಿಕೊಳ್ಳಬೇಕು’ ಎಂದು ಕಬ್ಬು ಬೆಳೆಗಾರರ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ಸರದಾರ ಮತ್ತು ಅಖಂಡ ಕರ್ನಾಟಕ ರೈತ ಜಾಗೃತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಸ್ತೆ ವಿಸ್ತರಣೆಯಿಂದ ಜನರಿಗೆ ಅನುಕೂಲವಾಗಲಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಆಗಬಾರದು. ಇಡೀ ಪಟ್ಟಣದ ಸೌಂದರ್ಯ ಮತ್ತು ಅನುಕೂಲತೆ ಒದಗಿಸುವ ಕೆಲಸ ಅಗಬೇಕು’ ಎಂದು ಪ್ರತಿಪಾದಿಸಿದರು.

‘ಪಟ್ಟಣದ ಸೋಮವಾರ ಮತ್ತು ಗುರುವಾರ ಪೇಟೆ ಎಂದರೆ ಊರಿನ ಮೂಗು ಇದ್ದಂತೆ. ಹಾಗಾಗಿ ಸುಸಜ್ಜಿತ ದ್ವಿಪಥ ರಸ್ತೆ ನಿರ್ಮಾಣ ಮಾಡುವುದು ಸೂಕ್ತ. ವಿಸ್ತರಣೆಗೆ ಸಹಕರಿಸಿದರೆ ಅದು ರಾಣಿ ಚನ್ನಮ್ಮಾಜಿಗೆ ನಾವು ನೀಡುವ ಗೌರವವಾಗಿದೆ’ ಎಂದರು.

ಈರಣ್ಣ ಅಕ್ಕಿ, ಶಿವಾನಂದ ತೇಗೂರ, ವಿಶ್ವನಾಥ ಹಾಲ್ಮಠ ಇದ್ದರು.

‘ವಿಸ್ತರಣೆ ಬೇಡ’: ‘ಸೋಮವಾರ ಪೇಟೆ ಪಗಡೆ ಬಜಾರ ಎಂದು ಮೊದಲಿಂದಲೂ ಪ್ರಸಿದ್ಧಿ ಪಡೆದಿದೆ. ಇಲ್ಲಿ ರಸ್ತೆ ವಿಸ್ತರಣೆ ಮಾಡುವುದು ಬೇಡ. ಸಾರ್ವಜನಿಕರ ಮತ್ತು ವಾಹನಗಳಿಗೆ ಏನೂ ತೊಂದರೆ ಆಗುವುದಿಲ್ಲ’ ಎಂದು ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಜಗದೀಶ ಬಿಕ್ಕಣ್ಣವರ ಅಭಿಪ್ರಾಯಪಟ್ಟಿದ್ದಾರೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘ಸೋಮವಾರ ಪೇಟೆಯು ಜನವಸತಿ ಪ್ರದೇಶವಾಗಿದೆ. ಮಾರುಕಟ್ಟೆ ಪ್ರದೇಶವಾಗಿ ಉಳಿದಿಲ್ಲ. ವಿಸ್ತರಣೆಯಿಂದ ಮನೆ ಕಳೆದುಕೊಂಡ ಬಹಳಷ್ಟು ಬಡವರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ. ವಿಸ್ತರಣೆಯಿಂದ ಅವರಿಗೆ ಹಿಂಸೆ ಕೊಟ್ಟಂತೆ ಆಗುತ್ತದೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-21-346807449

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.