ಸುಂಟಿಕೊಪ್ಪ: ಸಮೀಪದ ಕೊಡಗರಹಳ್ಳಿ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿಯ ವತಿಯಿಂದ ಮಹಾವಿಷ್ಣು, ಚಾಮುಂಡೇಶ್ವರಿ, ರಕ್ತೇಶ್ವರಿ ಹಾಗೂ ಪರಿವಾರ ದೇವರುಗಳ 48ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ನಡೆದ ನೇಮೋತ್ಸವವು ಬುಧವಾರ ಸಂಪನ್ನಗೊಂಡಿತು.

ಸೋಮವಾರ ಬೆಳಿಗ್ಗೆ ಗಣಪತಿ ಹೋಮ ಮತ್ತು ಕೊಡಿ ( ಬಾವುಟ) ಏರಿಸುವುದರೊಂದಿಗೆ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು.ಅಂದು ರಾತ್ರಿ ದೀಪರಾಧನೆ, ಏಳು ಸುತ್ತಿನ ಪ್ರದಕ್ಷಿಣೆ ಹಾಗೂ ಚಂಡೆಮೇಳ ನಡೆಯಿತು.

ಮಂಗಳವಾರ ಬೆಳಿಗ್ಗೆ ಚಾಮುಂಡೇಶ್ವರಿ ದೇವಿಯ ಅಭಿಷೇಕ ಪೂಜೆಯೊಂದಿಗೆ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.ನಂತರ ರಾತ್ರಿ ಚಾಮುಂಡೇಶ್ವರಿ ಕೋಲ, ಅಣ್ಣಪ್ಪ ಕೋಲ, ರಕ್ತೇಶ್ವರಿ ಕೋಲಗಳು ನಡೆದವು. ನೇಮೋತ್ಸವದ ಅಂಗವಾಗಿ ರಾತ್ರಿ ಪಟಾಕಿ ಮತ್ತು ಬಾನಂಗಳದಲ್ಲಿ ಬಣ್ಣಬಣ್ಣದ ಚೆಲುವಿನ ಚಿತ್ತಾರದ ಪಟಾಕಿಗಳ ಸಿಡಿದವು.

ಬುಧವಾರ ಮುಂಜಾನೆ ವಿಷ್ಣುಮೂರ್ತಿ ಕೋಲ ನಡೆಯಿತು. ನಂತರ ಅಜ್ಜಪ್ಪ ಕೋಲ, ರಕ್ತೇಶ್ವರಿ ಕೋಲ, ಚಾಮುಂಡೇಶ್ವರಿ ಕೋಲ ನಡೆದವು. ಇದೇ ವೇಳೆ ಆಗಮಿಸಿದ ಭಕ್ತರು ತಮ್ಮ ಇಷ್ಟ ದೈವದಲ್ಲಿ ಬೇಡಿಕೆ ಮತ್ತು ಹರಕೆಯನ್ನು ಒಪ್ಪಿಸಿ ಸಂತೃಪ್ತರಾದರು.

ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಮಡಿಕೇರಿ, ಕುಶಾಲನಗರ, ಸುಳ್ಯ, ಪುತ್ತೂರು, ಮಂಗಳೂರು, ಬೊಂಬಾಯಿ ಸೇರಿ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಈ ದೈವ ಕಾರ್ಯದಲ್ಲಿ ಭಾಗವಹಿಸದಲ್ಲದೇ ಶಕ್ತಿ ದೈವ ದರ್ಶನವನ್ನು ವೀಕ್ಷಿಸಿದರು.

ದೇವಿಗೆ ನೈವೇದ್ಯ ಪೂಜೆ ನೆರವೇರಿಸುವ ಮೂಲಕ ಮೂರು ದಿನದ ನೇಮೋತ್ಸವ ಸಂಪನ್ನಗೊಂಡಿತು. ನೇಮೋತ್ಸವದ ಅಂಗವಾಗಿ ದೇವಾಲಯ ಹಾಗೂ ಕೊಡಗರಹಳ್ಳಿ ರಸ್ತೆಯ ಎರಡು ಬದಿಗಳು ವಿದ್ಯುತ್ ದೀಪ, ಕೇಸರಿ ಬಂಟಿಂಗ್ಸ್, ಬಾವುಟಗಳಿಂದ ಕಂಗೊಳಿಸಿದವು. ಭಕ್ತರಿಗೆ ಮೂರು ದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-51-1181571365

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.