ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಯ ಅಹಂ ಇರಬಾರದು: ಸ್ವಾಮೀಜಿ

ಮಡಿಕೇರಿಯಲ್ಲಿ ‘ರೋಟರಿ ಮಿಸ್ಟಿಹಿಲ್ಸ್’ ಪದಗ್ರಹಣ ಸಮಾರಂಭ
Last Updated 24 ಜೂನ್ 2019, 12:12 IST
ಅಕ್ಷರ ಗಾತ್ರ

ಮಡಿಕೇರಿ: ‘ಸೇವೆ ಎಂಬುದು ಸದಾ ಮಹತ್ತರವಾದದ್ದನ್ನೇ ಬಯಸುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಕಿಂಚಿತ್ತೂ ಸೇವೆ ಕೂಡ ಮಹತ್ವದ್ದು ಎಂಬ ಭಾವನೆ ಬೆಳೆಯಬೇಕು’ ಎಂದು ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ನಗರದಲ್ಲಿ ರೋಟರಿ ಮಿಸ್ಟಿಹಿಲ್ಸ್‌ನ ನೂತನ ಅಧ್ಯಕ್ಷರಾಗಿ ಎಂ.ಆರ್. ಜಗದೀಶ್ ಮತ್ತು ಕಾರ್ಯದರ್ಶಿಯಾಗಿ ಪ್ರಮೋದ್ ಕುಮಾರ್ ರೈ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜ್ಞಾವಂತ ನಾಗರಿಕರು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಯಾವುದೇ ಚಿಕ್ಕ ಸೇವೆಯನ್ನೂ ಉಪೇಕ್ಷೆ ಮಾಡಬಾರದು. ಸೇವೆ ಎಲ್ಲಾವ್ಯಾಪಿಯನ್ನೂ ಮೀರಿ ವಿಶಾಲವಾಗಿದೆ. ನಾವು ಮನುಜರಾಗಿ ಜೀವಿಸಿದ್ದಕ್ಕೆ ಸೇವೆಯಿಂದ ಸಾರ್ಥಕತೆ ದೊರಕುತ್ತದೆ ಎಂದು ಹೇಳಿದರು.

‘ಯಾವುದೇ ವ್ಯಕ್ತಿ, ಸಂಘ–ಸಂಸ್ಥೆಗಳಿಗೆ ತಾವು ಮಾಡಿದ ಸೇವೆಯ ಬಗ್ಗೆ ಅಹಂ ಇರಕೂಡದು. ಭಗವಂತ ಕೊಟ್ಟ ಸಿರಿವಂತಿಕೆಯಲ್ಲಿ ಸ್ವಲ್ಪ ಪಾಲನ್ನಾದರೂ ಸಮಾಜದಲ್ಲಿರುವಶೋಷಿತ ವಗ೯ಕ್ಕೆ ವಿನಿಯೋಗಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಜ್ಞಾನವಿದ್ದಲ್ಲಿ ಅಜ್ಞಾನ ಎಂಬುದು ಕಾಲಿರಿಸುವುದಿಲ್ಲ. ಒಳ್ಳೆಯ ಸಂಸ್ಕಾರ ಒಳ್ಳೆಯ ಸಮಾಜಕ್ಕೆ, ಕೌಟುಂಬಿಕ ಜೀವನಕ್ಕೆ ನಾಂದಿಯಾಗಿದೆ’ ಎಂದೂ ಹೇಳಿದರು.

ವೃದ್ಧರಿಗೆ ಸಹಾಯ ಮಾಡುವುದು ಸಂಘ–ಸಂಸ್ಥೆಗಳ ಕರ್ತವ್ಯವಾಗಬೇಕು. ಆದರೆ, ವೃದ್ಧಾಶ್ರಮಗಳು ಸಮಾಜದಲ್ಲಿ ಹೆಚ್ಚುತ್ತಿರುವುದು ಆತಂಕಕಾರಿಯಾಗಿದ್ದು ನಾಗರಿಕ ಸಮಾಜಕ್ಕೆ ಉತ್ತಮ ಲಕ್ಷಣವಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಮಿಸ್ಟಿ ಹಿಲ್ಸ್ ನ ನೂತನ ಆಡಳಿತ ಮಂಡಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ರೋಟರಿಯ ಮಾಜಿ ಸಹಾಯಕ ಗವರ್ನರ ಬಿ.ಕೆ. ರವೀಂದ್ರ ರೈ, ರೋಟರಿ ವಲಯದ ಪೈಕಿ ವಲಯ 5ರಲ್ಲಿ ಭಾರತವು 27 ಸಾವಿರ ಸದಸ್ಯರನ್ನು ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 6,500 ಹೊಸ ಸದಸ್ಯರನ್ನು ಭಾರತ ರೋಟರಿಗೆ ಸೇಪ೯ಡೆಗೊಳಿಸಿದೆ. ಈ ಪೈಕಿ 850 ಸದಸ್ಯರ ನೋಂದಣಿ ಮೂಲಕ ಕೊಡಗು ಜಿಲ್ಲೆಯನ್ನೂ ಒಳಗೊಂಡ ರೋಟರಿ 3181 ಜಿಲ್ಲೆಯು ಅತ್ಯಧಿಕ ಸದಸ್ಯರ ಸೇರ್ಪಡೆಯ ಮೂಲಕ ದಾಖಲೆ ಮಾಡಿದೆ ಎಂದರು.

ರೋಟರಿ ವಲಯ 6 ರ ನೂತನ ಸಹಾಯಕ ಗವರ್ನರ್ ಪಿ.ನಾಗೇಶ್ ಅವರುಮಿಸ್ಟಿ ಹಿಲ್ಸ್‌ನ ವಾರ್ತಾ ಸಂಚಿಕೆ ರೋಟೋ ಮಿಸ್ಟ್ ಅನ್ನು ಬಿಡುಗಡೆಗೊಳಿಸಿದರು.

ಮಡಿಕೇರಿಯ ವಿಕಾಸ ಜನಸೇವಾ ಟ್ರಸ್ಟ್ ನ ವಾಸಿಗಳಿಗೆ ಟ್ರಸ್ಟ್ ನ ಮುಖ್ಯಸ್ಥ ರಮೇಶ್ ಮೂಲಕ ಮಿಸ್ಟಿ ಹಿಲ್ಸ್ ವತಿಯಿಂದ ಪರಿಕರಗಳನ್ನು ವಿತರಿಸಲಾಯಿತು.

ಮಿಸ್ಟಿ ಹಿಲ್ಸ್‌ಗೆ ಎಸ್.ಎಸ್. ಪೂವಯ್ಯ ಮತ್ತು ಬಿ.ಕೆ.ಕಾಯ೯ಪ್ಪ ಅವರನ್ನು ನೂತನ ಸದಸ್ಯರನ್ನಾಗಿ ಸೇಪ೯ಡೆಗೊಳಿಸಲಾಯಿತು

ರೋಟರಿಯ ಹಿಂದಿನ ಸಾಲಿನ ಸಹಾಯಕ ಗವರ್ನರ್‌ ಧರ್ಮಪುರ ನಾರಾಯಣ್, ನೂತನ ಸಾಲಿನರೋಟರಿ ವಲಯ ಕಾರ್ಯದರ್ಶಿ ಎಚ್.ಟಿ. ಅನಿಲ್, ಹಿಂದಿನ ಸಾಲಿನ ವಲಯ ಕಾರ್ಯದರ್ಶಿ ಕ್ರೆಜ್ವಲ್ ಕೋಟ್ಸ್, ಜೋನಲ್ ಲೆಫ್ಟಿನೆಂಟ್ ಕೇಶವ ಪ್ರಸಾದ್ ಮುಳಿಯ, ಹಿಂದಿನ ಸಾಲಿನ ಜೋನಲ್ ಲೆಫ್ಟಿನೆಂಟ್ ಚೀಯಣ್ಣ, ಮಿಸ್ಟಿ ಹಿಲ್ಸ್‌ ನ ನಿರ್ಗಮಿತ ಅಧ್ಯಕ್ಷ ಜಿ.ಆರ್.ರವಿಶಂಕರ್, ನಿರ್ಗಮಿತ ಕಾರ್ಯದರ್ಶಿ ಎಂ.ಯು.ಮಹೇಶ್ ಹಾಜರಿದ್ದರು.

ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಪ್ರಮೋದ್ ಕುಮಾರ್ ರೈ ವಂದಿಸಿದರು. ಎ.ಕೆ.ವಿನೋದ್, ಡಾ.ನವೀನ್, ಲೀನಾ ಪೂವಯ್ಯ, ಎಂ.ಧನಂಜಯ್, ಡಾ.ಶ್ರೀಧರ್ ಹೆಗ್ಗಡೆ, ಪ್ರಸಾದ್ ಗೌಡ, ಎಂ.ಪಿ.ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT