ಮಡಿಕೇರಿ: ಕೊಡಗು ಜಿಲ್ಲೆಯಲ್ಲಿರುವ ಸಾವಿರಾರು ಪ್ರಾಚ್ಯಾವಶೇಷಗಳಿಗೆ ಪೀಠ ಕಟ್ಟುವ ಕಾರ್ಯ ಇದೀಗ ಆರಂಭಗೊಂಡಿದೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಈಗಾಗಲೇ ಕುಶಾಲನಗರ, ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಈ ಕಾರ್ಯ ಭರದಿಂದ ನಡೆಯುತ್ತಿದೆ.

ಇಲಾಖೆ ವತಿಯಿಂದ ಮಡಿಕೇರಿ, ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕುಗಳಲ್ಲಿ 2020–21, 2021–22 ಹಾಗೂ 2022–23ರಲ್ಲಿ ಗ್ರಾಮಾವಾರು ಸರ್ವೇ ಮೂಲಕ ಗುರುತಿಸಿರುವ ಪ್ರಾಚ್ಯಾವಶೇಷಗಳಿಗೆ ಪೀಠ ಕಟ್ಟಿ ಸಂರಕ್ಷಣೆ ಮಾಡಲಾಗುತ್ತಿದೆ.

ಇವುಗಳಲ್ಲಿ ಶಾಸನಗಳು, ವೀರಗಲ್ಲು, ಸತಿಕಲ್ಲು, ಕೋಲೆಕಲ್ಲು, ನಿಷಿಧಿ ಕಲ್ಲು, ಶಿಲಾಶಿಲ್ಪಗಳು ಸೇರಿದಂತೆ ಅನೇಕ ಬಗೆಯ ಪ್ರಾಚ್ಯಾವಶೇಷಗಳು ಸೇರಿವೆ. ಇವುಗಳೆಲ್ಲವೂ ಇದುವರೆಗೂ ಯಾರಿಗೂ ಬೇಡವಾದ ಸ್ಥಿತಿಯಲ್ಲಿ ಬಿದ್ದಿದ್ದವು. ಹಲವು ಈಗಾಗಲೇ ನಶಿಸುವ ಹಂತಕ್ಕೆ ಬಂದಿದ್ದವು. ಕೆಲವೊಂದು ನಶಿಸಿಯೂ ಹೋಗಿದ್ದವು. ಇವುಗಳನ್ನು ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಈ ಪ್ರಾಚ್ಯಾವಶೇಷಗಳಿಗೆ ತಕ್ಕಂತೆ ಪೀಠ ಕಟ್ಟುವ ಕಾರ್ಯ ಆರಂಭಿಸಲಾಗಿದೆ.

ಕೇವಲ ಪೀಠ ಕಟ್ಟುವುದು ಮಾತ್ರವಲ್ಲ, ಅದರ ಮುಂದೆ ಆ ಪ್ರಾಚ್ಯಾವಶೇಷದ ಕುರಿತು ಮಾಹಿತಿ ಫಲಕವನ್ನೂ ಹಾಕಲಾಗುತ್ತದೆ. ಆಗ ಯಾರೇ ಬಂದು ನೋಡಿದರೂ ಆ ಪ್ರಾಚ್ಯಾವಶೇಷ ಯಾವ ವಿಭಾಗಕ್ಕೆ ಸೇರುತ್ತದೆ, ಯಾವ ಕಾಲಕ್ಕೆ ಸೇರಿದ್ದು, ಅದರ ಮಹತ್ವ ಏನು ಎಂಬಿತ್ಯಾದಿ ವಿಚಾರಗಳೆಲ್ಲವೂ ಕ್ಷಣ ಮಾತ್ರದಲ್ಲಿ ಗೊತ್ತಾಗುತ್ತದೆ. ಇದರಿಂದ ಪ್ರವಾಸಿಗರಿಗೆ ಮಾತ್ರವಲ್ಲ ಅದೇ ಗ್ರಾಮದಲ್ಲಿರುವ ಯುವಪೀಳಿಗೆಗೂ ಅವುಗಳ ಮಹತ್ವದ ಅರಿವಾಗುತ್ತದೆ.

ಸದ್ಯ, ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕುಗಳಲ್ಲಿರುವ ಪ್ರಾಚ್ಯಾವಶೇಷಗಳಿಗೆ ಪೀಠ ಕಟ್ಟಲಾಗುತ್ತಿದೆ. ಇವುಗಳ ಪೈಕಿ ಅತ್ಯಧಿಕ ಪ್ರಾಚ್ಯಾವಶೇಷಗಳು ಸೋಮವಾರಪೇಟೆ ತಾಲ್ಲೂಕು ಒಂದರಲ್ಲೆ ಇದೆ. 400–500ರಷ್ಟು ಪ್ರಾಚ್ಯಾವಶೇಷಗಳಿಗೆ ಸೋಮವಾರಪೇಟೆ ತಾಲ್ಲೂಕಿನಲ್ಲಿ ಪೀಠ ಕಟ್ಟಲಾಗುತ್ತಿದೆ. ಉಳಿದಂತೆ, ಕುಶಾಲನಗರದಲ್ಲಿ 60, ಮಡಿಕೇರಿಯಲ್ಲಿ 50 ಪ್ರಾಚ್ಯಾವಶೇಷಗಳನ್ನು ಪೀಠ ನಿರ್ಮಿಸುವುದಕ್ಕೆಂದು ಗುರುತಿಸಲಾಗಿದೆ.

ಪ್ರಾಚ್ಯಾವಶೇಷ ಸಂರಕ್ಷಣಾ ಯೋಜನೆಯಡಿ ಒಟ್ಟು ₹ 70 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಮೇ 1ರಿಂದ ಆರಂಭವಾಗಿರುವ ಈ ಕಾಮಗಾರಿಗೆ 3 ತಿಂಗಳ ಗಡುವು ನೀಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-1334180947

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.