ಮಡಿಕೇರಿ: ಡಿ.ಕೆ.ಶಿವಕುಮಾರ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸುವವರ ಸಾಲಿನಲ್ಲಿ ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು ಇರಬಹುದೇ ಎಂಬ ಜನರ ನಿರೀಕ್ಷೆ ಹುಸಿಯಾಯಿತು.

ಕಳೆದ 13 ವರ್ಷಗಳಿಂದ ನಿರಂತರವಾಗಿರುವ ಈ ನಿರಾಸೆಯ ಕತ್ತಲಲ್ಲೂ ಮುಂಬರುವ ಸಂಪುಟ ವಿಸ್ತರಣೆಯಲ್ಲಾದರೂ ಕೊಡಗು ಜಿಲ್ಲೆಯ ಒಬ್ಬರಿಗಾದರೂ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಮೂಡಿದೆ.

ಸದ್ಯ, ಪ್ರಮಾಣ ವಚನ ಸ್ವೀಕರಿಸಿದವರು ಹಿರಿಯರಾಗಿರುವುದರಿಂದ ಸಹಜವಾಗಿಯೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಕೊಡಗು ಜಿಲ್ಲೆಯವರಿಗೆ ಸ್ಥಾನ ನೀಡಿಲ್ಲ. ಮುಂಬರುವ ಸಂಪುಟ ವಿಸ್ತರಣೆಯಲ್ಲೂ ಮೊದಲ ಬಾರಿಗೆ ಶಾಸಕರಾದವರಿಗೆ ಸಚಿವ ಸ್ಥಾನದ ಅವಕಾಶ ನೀಡುವುದು ಕಷ್ಟ ಎಂಬ ಅನುಮಾನಗಳು ಕಾಡುತ್ತಿವೆ. ಆದಾಗ್ಯೂ, ಮೊದಲ ಬಾರಿಗೆ ಶಾಸಕರಾದವರು ಎಂಬುದನ್ನು ಬದಿಗಿಟ್ಟು ಇವರ ಶೈಕ್ಷಣಿಕ ವಿದ್ಯಾರ್ಹತೆಯನ್ನು ಗಮನಿಸಿ, ಇವರ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡಾದರೂ ಜಿಲ್ಲೆಗೆ ಒಂದಾದರೂ ಸಚಿವ ಸ್ಥಾನ ದೊರಕಬಹುದು ಎಂಬ ಆಶಾಭಾವನೆ ಇದೆ.

ಕೊಡಗು ಜಿಲ್ಲೆಯ ಬಹುತೇಕ ಎಲ್ಲ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲೂ ಇದೇ ಬಗೆಯ ಚರ್ಚೆಗಳೇ ನಡೆಯುತ್ತಿವೆ. ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಲ್ಲಿ ಅವರು ಕೊಡಗು ಜಿಲ್ಲೆಯ ಸಮಸ್ಯೆಗಳನ್ನು ಸಮರ್ಥವಾಗಿ ಸಂಪುಟದ ಗಮನಕ್ಕೆ ತಂದು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿ, ಇಲ್ಲಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಇದೆ.

ಪರಿಸ್ಥಿತಿ ಹೀಗಿದ್ದರೂ, ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಬಹುತೇಕ ಎಲ್ಲ ಸಂಘ, ಸಂಸ್ಥೆಗಳು, ಮುಖಂಡರು, ಸಂಘಟನೆಗಳು ಕೊಡಗು ಜಿಲ್ಲೆಯ ಒಬ್ಬರಿಗಾದರೂ ಸಚಿವ ಸ್ಥಾನ ಕೊಡಿ ಎಂದು ಒತ್ತಾಯಿಸುತ್ತಲೇ ಇದ್ದಾರೆ.

ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ಮಡಿಕೇರಿ: ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಇಲ್ಲಿನ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ಮಡಿಕೇರಿ ನಗರ ಕಾಂಗ್ರೆಸ್ ಮತ್ತು ಮಡಿಕೇರಿ ಬ್ಲಾಕ್ ಕಾಂಗ್ರೆಸ್
ಸಮಿತಿ ವತಿಯಿಂದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಕಾಂಗ್ರೆಸ್ ನಗರಾಧ್ಯಕ್ಷ ಎ.ಎಸ್.ಪ್ರಕಾಶ್ ಆಚಾರ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರ ಘೋಷಣೆಗಳನ್ನು ಕೂಗಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಂತರ, ಪಟಾಕಿಯಿಂದ ಚೆಲ್ಲಿದ ಕಸವನ್ನು ತಾವೇ ತೆಗೆದರು.

ಮಡಿಕೇರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ, ಕಾಂಗ್ರೆಸ್ ಮುಖಂಡರಾದ ಕಲೀಲ್ ಬಾಷಾ, ಯಶ್ ದೋಲ್ಪಾಡಿ, ಫ್ಯಾನ್ಸಿ ಪಾರ್ವತಿ, ದಿನೇಶ್ ಶೆಟ್ಟಿ, ಆರ್.ಪಿ.ಚಂದ್ರಶೇಖರ್, ಮುದ್ದುರಾಜು, ರವುಫ್ ಅಹಮದ್, ಕೋಚನ ಚೇತನ್, ಪುಷ್ಪ ಪೂರ್ಣಚ್ಚ, ನಂದ, ಎಚ್.ಕೆ.ಸುಬ್ರಮಣಿ, ಜಿ.ಆರ್.ರಾಜು, ವಿ.ಕೆ.ನಜಿರ್ ಹುಸೇನ್, ಸದಾ ಮುದ್ದಪ್ಪ, ಜಗದೀಶ್ ಜಿ.ಸಿ.ಪವಿತ್ರಾ, ವಿಮಲಾ, ಪ್ರೇಮಾ, ಲೀಲಾ ಶೇಷಮ್ಮ, ನಿಂಗಪ್ಪ, ಧನಲಕ್ಷ್ಮಿ, ಫರೀದಾ ಬಾನು, ತಾಜುನ್ನಿಸ, ರವಿ ಪಾಪು, ರಿಯಾಸುದ್ದೀನ್, ಸೈಮನ್, ಎಂ.ಎನ್.ದಯಾನಂದ್, ಪ್ರತಾಪ್, ಯತೀಶ್, ಸುಲೇಮಾನ್, ಸಂಪತ್ ರಾಜ್ ಭಾಗವಹಿಸಿದ್ದರು.

260604-51-671787472

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.