ಮಡಿಕೇರಿ: ಒಂದು ತಿಂಗಳಿಗೂ ಹೆಚ್ಚು ಕಾಲ, 125ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದ ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಶಂಕರ್ ಸ್ವಾಮಿ ಸ್ಮರಣಾರ್ಥ ಇಲ್ಲಿ ನಡೆದ ಮಕ್ಕಳ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರಕ್ಕೆ ತೆರೆ ಬಿತ್ತು.

ನಿತ್ಯ ಬೆಳಿಗ್ಗೆ 6.30ರಿಂದ 8.30ರವರೆಗೂ ನಡೆಯುತ್ತಿದ್ದ ಈ ಶಿಬಿರದಲ್ಲಿ ಪ್ರಾಣಾಯಾಮ, ಹಾಕಿ, ಅಥ್ಲೆಟಿಕ್ಸ್ ಮೊದಲಾದ ತರಬೇತಿಗಳನ್ನು ಪರಿಣತರು ನೀಡಿದರು. ಮಕ್ಕಳಿಗೆ ನಿತ್ಯವೂ ಉಚಿತವಾಗಿ ಹಾಲು, ಬ್ರೆಡ್ ಜಾಮ್, ಬಾಳೆಹಣ್ಣು, ಕೋಳಿಮೊಟ್ಟೆಗಳನ್ನು ವಿತರಿಸಲಾಯಿತು. ಆಗಿದ್ದಾಗ್ಗೆ ಉಪಾಹಾರದ ವ್ಯವಸ್ಥೆಯೂ ಇತ್ತು.

ನಿಶಾನೆಮೊಟ್ಟೆಗೆ ಎಲ್ಲ ಮಕ್ಕಳನ್ನೂ ಚಾರಣಕ್ಕೆ ಕರೆದುಕೊಂಡು ಹೋಗಲಾಯಿತು. ಟರ್ಫ್ನಲ್ಲಿ ಹಾಕಿ ಪಂದ್ಯಾವಳಿ ,ಮ್ಯಾನ್ಸ್ ಕಾಂಪೌಂಡ್ನಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆದವು. ವಿಜೇತರಿಗೆ ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಕ್ಯಾಪ್ಟನ್, ಮ್ಯಾರಥಾನ್ ಒಟಗಾರ ಕಿಮ್ಮುಡಿರ ಶಿವಪ್ರಕಾಶ್, ‘ಮಕ್ಕಳು ಬಾಲ್ಯಾವಸ್ಥೆಯಿಂದಲೇ ಶಿಸ್ತನ್ನು ಮೈಗೂಡಿಸಿಕೊಳ್ಳುವದರೊಂದಿಗೆ ದೇಶ ಭಕ್ತರಾಗಿ ಬಾಳಬೇಕು’ ಎಂದು ಕಿವಿಮಾತು ಹೇಳಿದರು.

ಶಿಬಿರದಲ್ಲಿ ಕಲಿತದ್ದನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಶಿಬಿರ ಆಯೋಜನೆ ಮಾಡಿದವರಿಗೆ ಹಾಗೂ ತರಬೇತು ನೀಡಿದವರ ಶ್ರಮಕ್ಕೆ ಬೆಲೆ ಸಿಗಲಿದೆ. ಶಿಸ್ತನ್ನು ರೂಢಿಸಿಕೊಳ್ಳುವದರೊಂದಿಗೆ ಮಕ್ಕಳು ಈಗಿನಿಂದಲೇ ದೇಶ ಭಕ್ತರಾಗಿ ದೇಶಕ್ಕಾಗಿ ಬದುಕಬೇಕು ಎಂದು ಹೇಳಿದರು.

ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಕಿರುದಂಡ ಗಣೇಶ್ ಮಾತನಾಡಿ, ‘ಮಕ್ಕಳಲ್ಲಿ ಶಿಸ್ತು ಅತಿ ಮುಖ್ಯ, ಶಿಬಿರದಲ್ಲಿ ಎಲ್ಲರೂ ಅದನ್ನೇ ಕಲಿಸುವುದು. ಯಾವದೇ ಕೆಲಸದಲ್ಲಾಗಲೀ ಶಿಸ್ತು ಮುಖ್ಯ. ಈ ಶಿಬಿರದಲ್ಲಿ ಪ್ರತಿ ವರ್ಷ 100ರಿಂದ 125 ಮಕ್ಕಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ. ಇದು ಶಿಬಿರದ ಯಶಸ್ಸಿಗೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

ಮ್ಯಾರಥಾನ್ ಓಟಗಾರ, ಕ.ಕಾವೇರಪ್ಪ ಮಾತನಾಡಿ, ‘ಮಕ್ಕಳಲ್ಲಿ ವಿನಯತೆ, ವಿನಮ್ರತೆ, ವಿವೇಕತೆ ಅತಿ ಮುಖ್ಯ, ಈ ಮೂರು ಗುಣಗಳನ್ನು ಬೆಳೆಸಿಕೊಂಡಲ್ಲಿ ಯಾವದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯ’ ಎಂದು ತಿಳಿಸಿದರು.

ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ‘ಮಕ್ಕಳು ಸಂಪಾದಿಸಿದ ಜ್ಞಾನ, ಅರಿವನ್ನು ಸಂರಕ್ಷಣೆ ಮಾಡಿಕೊಂಡು ಭವಿಷ್ಯದ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರಬೇಕು. ಪ್ರತಿ ದಿನ, ರಾತ್ರಿ ನಾವು ಏನು ಮಾಡಬಹುದೆಂಬುದರ ಬಗ್ಗೆ ಚಿಂತಿಸಬೇಕು. ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಯೋಚಿಸಬೇಕು. ಅವಾಗ ಮಾತ್ರ ತಿಂಗಳುಗಳ ಕಾಲ ಇಲ್ಲಿ ತರಬೇತಿ ನೀಡಿದವರ ಶ್ರಮ ಸಾರ್ಥಕವಾಗಲಿದೆ. ನಿಮ್ಮ ಭವಿಷ್ಯ ಕೂಡ ಉಜ್ವಲವಾಗಲಿದೆ’ ಎಂದು ಹೇಳಿದರು.

ವಾಂಡರ್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ ಶಿಬಿರದಲ್ಲಿ ಕಲಿತದ್ದನ್ನು ಮನನ ಮಾಡಿಕೊಳ್ಳುವದರೊಂದಿಗೆ ಪ್ರತಿನಿತ್ಯ ಅಭ್ಯಾಸ ಮುಂದುವರಿಸಿ ಸಾಧನೆ ಮಾಡುವಂತೆ ಕರೆ ನೀಡಿದರು.

ಶಿಬಿರದಲ್ಲಿ ಕಲಿತ ಮಕ್ಕಳು ಯೋಗ ಪ್ರದರ್ಶಿಸಿದರು.

ವಾಂಡರ್ಸ್ ಹಿರಿಯ ಆಟಗಾರ ಕೋಟೇರ ನಾಣಯ್ಯ, ಶಿಬಿರದ ಸಂಚಾಲಕ ಬಾಬು ಸೊಮಯ್ಯ, ತರಬೇತುದಾರರುಗಳಾದ ಬೊಪ್ಪಂಡ ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ನಾಟೋಳಂಡ ಸೋಮಯ್ಯ, ಕರವಂಡ ಕಿರಣ್, ಲೋಕೇಶ್ ನಾಯ್ಡು, ಬಿ.ಎಸ್. ತಿಲಕ್, ಕಾವ್ಯ ಸೋಮಯ್ಯ, ಜನ್ಯ, ಯೋಗ ಶಿಕ್ಷಕ ಕೆ.ಕೆ.ಮಹೇಶ್ ಕುಮಾರ್, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ವೆಂಕಟೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-852191930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.