ಸುಂಟಿಕೊಪ್ಪ: ‘ಕೊಡಗು ಜಿಲ್ಲೆಯಲ್ಲಿ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಸೌಹಾರ್ದತೆ ಮತ್ತು ಕನ್ನಡ ಭಾಷಾಭಿಮಾನ ಹೆಚ್ಚಿದೆ’ ಎಂದು ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.

ಹುಣಸೂರು ಸಮೀಪದ ಬನ್ನಿಗುಪ್ಪೆ ಗ್ರಾಮದಲ್ಲಿ ಈಚೆಗೆ ಕೊಡಗು ಪತ್ರಕರ್ತರ ಸಂಘದ ಕುಶಾಲನಗರದ ತಾಲ್ಲೂಕು ಘಟಕ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೊಡಗು ಜಿಲ್ಲೆ ವಿಭಿನ್ನ ಧಾರ್ಮಿಕ, ಸಮುದಾಯಗಳ ಸಹಬಾಳ್ವೆಗೆ ಸಾಕ್ಷಿಯಾಗಿ ವಿಶಿಷ್ಟ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ ಜನರನ್ನು ಹೊಂದಿದೆ. ಕನ್ನಡ, ಕೊಡವ, ಅರೆಭಾಷೆ, ತುಳು, ಮಲಯಾಳ, ಹಿಂದಿ, ತೆಲುಗು, ತಮಿಳು ಹೀಗೆ ವಿವಿಧ ಭಾಷೆಗಳನ್ನು ಕೊಡಗಿನ ಜನತೆ ಬಲ್ಲವರಾಗಿದ್ದರೂ, ಬಹುತೇಕ ಕನ್ನಡವೇ ಕೊಡಗಿನ ಜನತೆಯ ಪ್ರೀತಿಯ ಭಾಷೆಯಾಗಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನ ಜನರು ಕನ್ನಡವನ್ನು ಹೆಚ್ಚು ಪ್ರೀತಿಸುತ್ತಾರೆ. ಕೊಡಗಿನಲ್ಲಿ ಕಂಡು ಬರುವ ಕನ್ನಡಾಭಿಮಾನ ಬೇರೆಲ್ಲೂ ಕಾಣಸಿಗಲಾರದು. ಶ್ರೀಮಂತಿಕೆಯ ಜೊತೆ ಕಡುಬಡವರೂ ಕೊಡಗಿನಲ್ಲಿದ್ದಾರೆ. ಹೀಗಿದ್ದರೂ, ಎಲ್ಲಾ ರೀತಿಯ ಜನರ ನಡುವೆ ಸೌಹಾರ್ದತೆ ಇದೆ. ಇದುವೇ ಕೊಡಗಿನ ಹೆಗ್ಗಳಿಕೆ’ ಎಂದು ಶ್ಲಾಘಿಸಿದರು.

‘ಇಂದಿನ ಯುವಪೀಳಿಗೆ ಸಾಹಿತ್ಯ ಓದುತ್ತಿಲ್ಲ ಎನ್ನುವುದಕ್ಕಿಂತ ಅವರು ಓದುವ ಮಾಧ್ಯಮ ಬದಲಾಗಿದೆ ಎಂದು ಹೇಳಬಹುದು. ಇಂದು ಸಾಹಿತ್ಯ ಓದಲು ನಾನಾ ಮಾಧ್ಯಮಗಳಿವೆ. ಪುಸ್ತಕದ ಬದಲಿಗೆ ಡಿಜಿಟಲ್ ಮಾಧ್ಯಮದ ಮೂಲಕ ಎಲ್ಲಾ ವಿಚಾರಗಳನ್ನೂ ಸಾಹಿತ್ಯ ಸೇರಿಕೊಂಡಂತೆ ಓದುವ ಪ್ರವೃತ್ತಿ ಹೆಚ್ಚಾಗುತ್ತಿದೆ’ ಎಂದರು.

‘ಮತ್ತೊಬ್ಬ ಸಾಹಿತಿಯ ಶೈಲಿಯನ್ನು ಅನುಸರಿಸುವ ಬದಲು ತಮ್ಮದೇ ಶೈಲಿಯಲ್ಲಿ ಬರೆಯುವ ಹವ್ಯಾಸ ರೂಢಿಸಿಕೊಳ್ಳುವವರ ಸಾಹಿತ್ಯ ಬಹುಕಾಲ ಇರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕುವೆಂಪು, ದೇವನೂರ ಮಹದೇವ, ತೇಜಸ್ವಿ, ಅನಂತಮೂರ್ತಿ, ಪಿ.ಲಂಕೇಶ್, ಎಂ.ಕೆ.ಇಂದಿರಾ, ಎಂ.ವ್ಯಾಸ, ಕೆ.ಟಿ.ಗಟ್ಟಿ, ಯಶವಂತ ಚಿತ್ತಾಲ, ಮಲಯಾಳದ ಖ್ಯಾತ ಲೇಖಕ ವೈಕಂ ಮಹಮ್ಮದ್ ಬಷೀರ್ ನನ್ನ ಸಾಹಿತ್ಯದ ಮೇಲೆ ಪ್ರಭಾವ ಬೀರಿದ ಲೇಖಕರಾಗಿದ್ದಾರೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-1360541931

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.