ಬಾಳೆಲೆ ಹೋಬಳಿಯಲ್ಲಿ ಅತಿ ಹೆಚ್ಚು ಕೊರತೆ
ಹೋಬಳಿವಾರು ಅಂಕಿ ಅಂಶ ಗಮನಿಸಿದರೆ ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಹೋಬಳಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಕೊರತೆಯನ್ನು ಮುಂಗಾರುಪೂರ್ವದಲ್ಲಿ ಎದುರಿಸುತ್ತಿದೆ. ಇಲ್ಲಿ ಮಾರ್ಚ್ 1ರಿಂದ ಏಪ್ರಿಲ್ 25ರವರೆಗೆ ಶೇ 82ರಷ್ಟು ಮಳೆ ಕೊರತೆಯಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯಲ್ಲಿ ಶೇ 76, ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ ಶೇ 75, ಪೊನ್ನಂಪೇಟೆ ತಾಲ್ಲೂಕಿನಲ್ಲಿ ಶೇ 68ರಷ್ಟು ಕೊರತೆ ಉಂಟಾಗಿದೆ. ಜೊತೆಗೆ, ಎಲ್ಲಾ ಹೋಬಳಿಗಳಲ್ಲೂ ಮಳೆ ಕೊರತೆ ಎದುರಾಗಿದ್ದು, ರೈತರು, ಬೆಳೆಗಾರರು ಮಳೆಯನ್ನೇ ಎದುರು ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ.