ಮಡಿಕೇರಿ: ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ವರ್ತನೆ ಅತಿರೇಕದ ಹಂತ ತಲುಪಿದೆ. ಇದು ಇತರ ಪ್ರವಾಸಿತಾಣಗಳಿಗಿಂತ ಹೆಚ್ಚಾಗಿ ದುಬಾರೆ ಸಾಕಾನೆ ಶಿಬಿರದಲ್ಲಿ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.

ಸಾಕಾನೆ ಶಿಬಿರದಲ್ಲಿ ಆನೆಗಳ ಜೊತೆ ಸೆಲ್ಫೀ, ಫೋಟೊಗಳಷ್ಟೇ ಅಲ್ಲ, ಅವುಗಳಿಗೆ ಆಹಾರ ತಿನಿಸುವುದು, ಅವುಗಳ ಸೊಂಡಿಲು ಮುಟ್ಟುವುದು, ಮೈ ಸ್ಪರ್ಶಿಸುವುದು ಹೀಗೆ ಮನಬಂದಂತೆ ವರ್ತಿಸುತ್ತಾರೆ. ಈ ರೀತಿ ಮಾಡುವುದರಿಂದ ಅವುಗಳಿಗೆ ಹೆಚ್ಚಿನ ಕಿರಿಕಿರಿ ಉಂಟಾಗುತ್ತಿದೆ.

ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದರೆ ಹೆಚ್ಚಿನ ಕಿರಿಕಿರಿ ಆಗದು. ಆದರೆ, ಬೇಸಿಗೆಯ ಈ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಇದು ಸಹ ಆನೆಗಳ ವರ್ತನೆ ಮೇಲೆ ಪರಿಣಾಮ ಬೀರುತ್ತಿದೆ.

ಆನೆ ಸ್ನಾನವನ್ನೇ ತೆಗೆದುಕೊಂಡರೆ ಟಿಕೆಟ್ ತೆಗೆದುಕೊಂಡು ಬಂದವರೆಲ್ಲ ಆನೆಯ ಮೈ ಉಜ್ಜುತ್ತಾರೆ. ಇದೆ ಅತಿಯಾದ ಕಿರಿಕಿರಿ. ಈ ವೇಳೆ ಕೆಲವರು ತೋರುವ ವರ್ತನೆಗಳು ಆತಂಕ ಹುಟ್ಟಿಸುತ್ತವೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಕಾಡಾನೆಗಳ ಕಾಲು, ಬಾಲ, ಸೊಂಡಿಲುಗಳನ್ನೂ ಕೆಲವರು ಹಿಡಿದುಕೊಳ್ಳಲು ಯತ್ನಿಸುತ್ತಾರೆ. ಆಗ ಅವರನ್ನು ನಿಯಂತ್ರಿಸುವುದೇ ದೊಡ್ಡ ಸಾಹಸದ ಕೆಲಸವಾಗುತ್ತದೆ. ‘ಇಷ್ಟು ದುಬಾರಿ ಟಿಕೆಟ್ ಖರೀದಿಸಿದ್ದೇವೆ. ಕನಿಷ್ಠ ಮುಟ್ಟದೇ ಹೋದರೆ ಹೇಗೆ ಎಂದು ವಾದಿಸುತ್ತಾರೆ’ ಎಂದು ಮತ್ತೊಬ್ಬ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು.

ಈ ಬಗೆಯ ಪ್ರವಾಸಿಗರ ಹುಚ್ಚಾಟಕ್ಕೆ ಕಡಿವಾಣ ಹಾಕುವವರು ಯಾರು ಪ್ರಶ್ನೆಗೆ ಅರಣ್ಯ ಇಲಾಖೆಯೇ ಉತ್ತರ ನೀಡಬೇಕಾಗಿದೆ. ಪ್ರವಾಸಿಗರಲ್ಲಿ ಅರಿವು, ಜಾಗೃತಿ ಮೂಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ‘ಆನೆಗಳಿಂದ ದೂರ ಇರಿ’ ಎಂಬ ಫಲಕಗಳನ್ನು ಅರಣ್ಯ ಇಲಾಖೆ ಈಗಾಗಲೆ ಅಲ್ಲಲ್ಲಿ ಅಳವಡಿಸಿದೆ. ಆದರೆ, ಈ ಫಲಕಗಳಲ್ಲಿರುವ ಅಕ್ಷರಗಳನ್ನು ಓದುವವರು ಯಾರೂ ಇಲ್ಲ. ಅದನ್ನು ಬಹುಪಾಲು ಮಂದಿ ನಿರ್ಲಕ್ಷಿಸುತ್ತಾರೆ. ಈ ಬಗೆಯ ನಿರ್ಲಕ್ಷ್ಯವೂ ಅಪಾಯಕ್ಕೆ ದಾರಿ ಮಾಡಕೊಡುತ್ತದೆ.

ಆನೆ ನಡೆದುಕೊಂಡು ಹೋಗುವಾಗ ಹಿಂದೆಯೇ ಹೋಗುವುದು, ಫೋಟೊ, ಸೆಲ್ಫೀ ತೆಗೆದುಕೊಳ್ಳುವುದು, ಫ್ಲಾಶ್ ಲೈಟ್ ಹಾಕುವುದು, ಸುಗಂಧದ್ರವ್ಯಗಳನ್ನು ಹಾಕಿಕೊಂಡು ಆನೆ ಸಮೀಪ ಹೋಗುವುದು ಹೀಗೆ ಹಲವು ಬಗೆಯ ಪ್ರವಾಸಿಗರ ವರ್ತನೆಗಳು ಆನೆಗಳನ್ನು ಕೆರಳಿಸುವಂತಿವೆ.

ದೊಡ್ಡ ದೊಡ್ಡ ಅಕ್ಷರಗಳಲ್ಲಿ ಜಾಗೃತಿ ಫಲಕಗಳನ್ನು ಹಾಕಬೇಕು, ಪ್ರವಾಸಿಗರಿಗೆ ಟಿಕೆಟ್ ಕೊಡುವಾಗಲೇ ಕಟ್ಟುನಿಟ್ಟಾಗಿ ನಿಯಮಗಳನ್ನು ತಿಳಿಸಬೇಕು, ನಿಯಮ ಮುರಿದರೆ ದುಬಾರಿ ದಂಡ ಹಾಕುವ ಎಚ್ಚರಿಕೆ ನೀಡಬೇಕು, ಎಲ್ಲ ಕಡೆ ಸಿಸಿಟಿವಿಗಳಿದ್ದು ಕಣ್ಗಾವಲು ಇದೆ ಎಂದು ಹೇಳಬೇಕು, ಆಗ ಬಹುತೇಕ ಪ್ರವಾಸಿಗರ ಅತಿರೇಕದ ವರ್ತನೆಗಳನ್ನು ಕಡಿವಾಣ ಬೀಳಬಹುದು.

ಈ ಬಗೆಯ ಅತಿರೇಕದ ವರ್ತನೆಗಳ ಕೇವಲ ದುಬಾರೆ ಸಾಕಾನೆ ಶಿಬಿರದಲ್ಲಿ ಮಾತ್ರವಲ್ಲ ಬೋಟಿಂಗ್, ರ್ಯಾಫ್ಟಿಂಗ್, ಹೊಳೆಯ ಬಳಿ ಮಾತ್ರವಲ್ಲ ಕೊಡಗಿನ ಉದ್ದಗಲಕ್ಕೂ ಅಲ್ಲಲ್ಲಿ ಕಂಡು ಬರುತ್ತಲೆ ಇರುತ್ತದೆ. ಸ್ಥಳೀಯರೊಂದಿಗೆ ಪ್ರವಾಸಿಗರು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದಾರೆ. ಪ್ರವಾಸಿಗರಲ್ಲೂ ಜಾಗೃತಿ ಮೂಡಬೇಕಿದೆ, ಸಾಮಾಜಿಕ ಜವಾಬ್ದಾರಿ ಹೆಚ್ಚಬೇಕಿದೆ.

ಪ್ರವಾಸಿಗರಿಗೆ ಜವಾಬ್ದಾರಿ ಇರಬೇಕು

ಕರ್ನಾಟಕದಲ್ಲಿರುವ ಆನೆ ಶಿಬಿರದಲ್ಲಿ ಸಕ್ರೇಬೈಲು, ದುಬಾರೆ ಮತ್ತು ಮತ್ತಿಗೋಡು ಶಿಬಿರದಲ್ಲಿ ಮಾತ್ರವೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಜವಾಬ್ದಾರಿ ಇರಬೇಕು. ಅರಣ್ಯ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು.
ಡಾ.ಮಮತಾ ಸತ್ಯನಾರಾಯಣ,ಆನೆ ಸಂರಕ್ಷಣ ಶಿಕ್ಷಣದ ತಜ್ಞರು.

ವಹಿಸಬೇಕಾದ ಎಚ್ಚರಿಕೆಗಳು

* ಆನೆ ಸೇರಿದಂತೆ ಯಾವುದೇ ವನ್ಯಜೀವಿಯಿಂದ ಸಾಕಷ್ಟು ಅಂತರ ಕಾಯ್ದುಕೊಂಡಿರಬೇಕು

* ಸುಗಂಧದ್ರವ್ಯಗಳನ್ನು ಹಾಕಿದ್ದರೆ ಸಮೀಪ ಹೋಗಲೇಬಾರದು

* ಕಣ್ಣುಕುಕ್ಕುವ ಬಣ್ಣಗಳಿರುವ ಬಟ್ಟೆಗಳನ್ನು ತೊಟ್ಟು ಆನೆ ಸಮೀಪ ಹೋಗಬಾರದು, ಪರಿಸರಕ್ಕೆ ಹೊಂದಿಕೊಳ್ಳುವ ಬಣ್ಣಗಳ ಬಟ್ಟೆಗಳನ್ನು ಧರಿಸಿರಬೇಕು

* ಮೊಬೈಲ್ ಬಳಕೆ ಬೇಡವೇ ಬೇಡ. ಫ್ಲಾಶ್ ಲೈಟ್ ಅನ್ನು ಹಾಕಲೇಬಾರದು

* ಫೋಟೊ ಬೇಕಿದ್ದರೆ ಅರಣ್ಯ ಇಲಾಖೆಯ ತಂಡವೇ ತೆಗೆದುಕೊಡುವ ವ್ಯವಸ್ಥೆ ರೂಪಿಸಬೇಕು

* ಮದ್ಯ ಸೇವಿಸಿ ಹೋಗಲೇಬಾರದು

* ತಿಂಡಿ ತಿನಿಸುಗಳನ್ನು ತಿನ್ನಿಸುವುದು ಬೇಡ.

* ಶಾಂತಿಯಿಂದ ನಿಶ್ಯಬ್ದದಿಂದ ಇರಬೇಕು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-746100455

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.