ಮಡಿಕೇರಿ: ಈಚೆಗಷ್ಟೇ ತಡಿಯಂಡಮೋಳ್ ಬೆ್ಟದಲ್ಲಿ ಚಾರಣಕ್ಕೆ ಹೊರಟಿದ್ದ ಕೇರಳದ ಮಹಿಳೆಯೊಬ್ಬರು 3 ದಿನ ನಾಪತ್ತೆಯಾಗಿದ್ದರು. ಈಗ ಎರಡು ಸಾಕಾನೆಗಳ ನಡುವಿನ ಕಾಳಗದಲ್ಲಿ ಸಿಲುಕಿ ತಮಿಳುನಾಡಿನ ಮಹಿಳೆ ಪ್ರಾಣ ಕಳೆದುಕೊಂಡರು. ಈ ಘಟನೆಗಳು ಕೊಡಗು ಜಿಲ್ಲೆಯ ಅರಣ್ಯ ಪ್ರವಾಸೋದ್ಯಮದ ಸ್ವರೂಪಕ್ಕೆ ಹಿಡಿದ ಕನ್ನಡಿ ಎನಿಸಿವೆ.

ಎರಡೂ ಘಟನೆಗಳಲ್ಲೂ ಮಹಿಳೆಯರು ಅರಣ್ಯ ಇಲಾಖೆಯ ಅಧಿಕೃತ ಟಿಕೆಟ್ ಖರೀದಿಸಿದ್ದರು. ಅವರು ಅಧಿಕೃತವಾಗಿಯೇ ಪ್ರವಾಸಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಹೀಗಿದ್ದರೂ, ಸಂಭವಿಸಿದ ಅವಘಡಗಳು ಪ್ರವಾಸಿಗರನ್ನು ಆತಂಕಕ್ಕೆ ದೂಡಿವೆ.

ಎರಡೂ ಪ್ರಕರಣಗಳಲ್ಲಿಯೂ ಸೂಕ್ತ ಭದ್ರತೆ ಇರಲಿಲ್ಲ ಎಂಬ ಆರೋಪ ಇದೆ. ಚಾರಣಕ್ಕೆ ಹೋದವರು ನಾಪತ್ತೆಯಾಗದಂತೆ ತಡೆಯುವ ಕ್ರಮಗಳು ಇದ್ದಿರಲಿಲ್ಲ. ದುಬಾರೆಯಲ್ಲಿ ಸಾಕಾನೆ ಸಮೀಪಕ್ಕೆ ಹೋದಾಗ ಅವರನ್ನು ತಕ್ಷಣ ರಕ್ಷಿಸುವ ಸಿಬ್ಬಂದಿಯೂ ಇರಲಿಲ್ಲ. ಇವೆಲ್ಲವೂ ಅರಣ್ಯ ಪ್ರವಾಸೋದ್ಯಮದಲ್ಲಿನ ಅಭದ್ರತೆಯನ್ನು ಎತ್ತಿ ತೋರಿಸುತ್ತಿವೆ.

ಕೊಡಗು ಜಿಲ್ಲೆಯಲ್ಲಿ ಅರಣ್ಯ ಪ್ರವಾಸೋದ್ಯಮ ಅತಿಯಾಯಿತೇ ಅಥವಾ ಮಿತಿ ಮೀರಿದ ಪ್ರವಾಸಿಗರು ಭೇಟಿ ಕೊಡುವುದರಿಂದ ಅವಘಡಗಳು ಸಂಭವಿಸುತ್ತಿವೆಯೇ ಎಂಬ ಪ್ರಶ್ನೆ ಜಿಲ್ಲೆಯ ಜನರಲ್ಲಿ ಮೂಡಿದೆ.

ಕೇವಲ ಅರಣ್ಯ ಪ್ರವಾಸೋದ್ಯಮ ಮಾತ್ರವಲ್ಲ ಒಟ್ಟಾರೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರವಾಸಿಗರು ಮಿತಿ ಮೀರಿದ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಜನರಲ್ಲಿ ಆತಂಕವೂ ಮನೆ ಮಾಡಿದೆ.

ಕೊಡಗು ಜಿಲ್ಲೆಯಲ್ಲಿ ಸಫಾರಿ, ಸಾಕಾನೆಗಳ ಶಿಬಿರ, ಚಾರಣ, ಜಲಸಾಹಸ ಕ್ರೀಡೆಗಳು ಹೀಗೆ ಅರಣ್ಯ ಆಧಾರಿತ ಪ್ರವಾಸೋದ್ಯಮ ತಾಣಗಳು ಹಲವಿವೆ. ಇಲ್ಲಿ ನಾಗರಹೊಳೆಯ ನಾಣಚ್ಚಿ ಬಳಿ ಸಫಾರಿ ಇದೆ, ಮತ್ತಿಗೋಡು, ದುಬಾರೆ, ಹಾರಂಗಿ ಸಾಕಾನೆ ಶಿಬಿರಗಳಿವೆ, ತಡಿಯಂಡಮೋಳ್ ಸೇರಿದಂತೆ ಅನೇಕ ಕಡೆ ಚಾರಣಗಳೂ ಇವೆ. ಅರಣ್ಯಕ್ಕೆ ಹೊಂದಿಕೊಂಡ ದುಬಾರೆಯ ಕಾವೇರಿ ಮತ್ತು ದಕ್ಷಿಣ ಕೊಡಗಿನ ಬರಪೊಳೆಯಲ್ಲಿ ರ್ಯಾಫ್ಟಿಂಗ್ನಂತಹ ಜಲ ಸಾಹಸ ಕ್ರೀಡೆಗಳೂ ಇವೆ. ಕೊಡಗಿಗೆ ಬಂದರೆ ಅರಣ್ಯ ಪ್ರವಾಸೋದ್ಯಮ ಎಲ್ಲ ಬಗೆಯ ಸವಿಗಳನ್ನು ಸವಿಯಬಹುದು ಎಂಬ ಭಾವ ಹೊರ ಜಿಲ್ಲೆ, ಹೊರರಾಜ್ಯದವರಲ್ಲಿ ಸಾಮಾನ್ಯವಾಗಿದೆ.

ಇಷ್ಟು ಸಾಲದು ಎಂಬಂತೆ, ಇತ್ತೀಚಿನ ವರ್ಷಗಳಲ್ಲಿ ಸಾಕಾನೆಗಳ ಮೈ ತೊಳೆಯುವ ಪ್ರವಾಸೋದ್ಯಮವೂ ಆರಂಭವಾಗಿದೆ. ಇದು ನಿಜಕ್ಕೂ ತೀರಾ ಅತಿಯಾಯಿತು ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಡುತ್ತಾರೆ. ಒಂದು ವೇಳೆ ಈ ಬಗೆಯ ಪ್ರವಾಸೋದ್ಯಮ ಇರದೇ ಇದ್ದಿದ್ದರೆ ಮೊನ್ನೆ ಬಲಿಯಾದ ತಮಿಳುನಾಡಿನ ಮಹಿಳೆ ಸಾಕಾನೆಗಳ ಮಜ್ಜನದ ಜಾಗಕ್ಕೆ ಹೋಗುತ್ತಿರಲಿಲ್ಲ. ಹೋದರೂ ಅಷ್ಟು ಸಮೀಪ ಇರುತ್ತಿರಲಿಲ್ಲ.

ಇನ್ನಾದರೂ, ಸರ್ಕಾರ ಅಪಾಯಕ್ಕೆ ಸಮೀಪ ಇರುವ ಅರಣ್ಯ ಪ್ರವಾಸೋದ್ಯಮದಲ್ಲಿ ರಕ್ಷಣಾ ಕ್ರಮಗಳನ್ನು ಬಿಗಿಗೊಳಿಸಬೇಕು. ಪ್ರವಾಸಿಗರಿಗೆ ಅವರ ಸುರಕ್ಷತೆಗ ಖಾತರಿ ನೀಡಬೇಕು. ಒಂದು ವೇಳೆ ಪ್ರವಾಸಿಗರ ಸಂಖ್ಯೆ ಮಿತಿ ಮೀರಿದರೆ ಅವರ ಸಂಖ್ಯೆಯನ್ನು ನಿಯಂತ್ರಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಮಾತ್ರ ಇಂತಹ ಘಟನೆಗಳನ್ನು ಮುಂದೆ ಸಂಭವಿಸದಂತೆ ತಡೆಯಬಹುದು ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಡುತ್ತಾರೆ.

ಇದರೊಂದಿಗೆ ಚಾರಣದ ಸಮಯದಲ್ಲಿ ದಾರಿ ತಪ್ಪದಂತೆ ನೋಡಿಕೊಳ್ಳಲು ಅನೇಕ ಬಗೆಯ ವೈಜ್ಞಾನಿಕ ಉಪಕರಣಗಳು ಬಂದಿವೆ. ಒಂದು ವೇಳೆ ಅವರು ದಾರಿ ತಪ್ಪಿದರೂ ಸುಲಭವಾಗಿ ಪತ್ತೆ ಮಾಡುವಂತಹ ಜಿಪಿಎಸ್ ಹಾಗೂ ಇನ್ನಿತರ ಉಪಕರಣಗಳೂ ಇವೆ. ಇಂತಹ ವೈಜ್ಞಾನಿಕತೆ ಉಪಕರಣಗಳನ್ನೂ ಸಾಧ್ಯವಾದಷ್ಟು ಮಟ್ಟಿಗೆ ಬಳಕೆ ಮಾಡಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.