ಮಡಿಕೇರಿ: 10 ಕುಟುಂಬ 18 ಗೋತ್ರದ ಜನಾಂಗವರಿಗೆ, ಗೌಡ ಯುವ ವೇದಿಕೆ ವತಿಯಿಂದ 2026 ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದೆ.

ಶನಿವಾರ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕುಟುಂಬವಾರು ಕ್ರಿಕೆಟ್ ಪಂದ್ಯಾವಳಿಗೂ ಮುನ್ನ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಗೌಡ ಯುವ ವೇದಿಕೆ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಾರ್ಯನಿರತ ಪತ್ರಕರ್ತರ ಸಂಘದ ಆಟಗಾರರು 5 ಓವರ್ಗಳಲ್ಲಿ4 ವಿಕೆಟ್ ಕಳೆದುಕೊಂಡು 84 ರನ್ ಕಲೆ ಹಾಕಿತ್ತು. ಬಳಿಕ ಬ್ಯಾಟ್ ಮಾಡಿದ ಕೊಡಗು ಗೌಡ ಯುವ ವೇದಿಕೆ ತಂಡ 5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 66 ರನ್ ಗಳಿಸುವ ಮೂಲಕ ಸೋಲು ಅನುಭವಿಸಿತು. ಆ ಮೂಲಕ ಪ್ರದರ್ಶನ ಪಂದ್ಯದಲ್ಲಿ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘ 18 ರನ್ಗಳ ಭರ್ಜರಿ ಗೆಲುವನ್ನ ಸಾಧಿಸಿತು.

ಇದಕ್ಕೂ ಮುನ್ನ ಮಡಿಕೇರಿ ಹೊರ ವಲಯದ ಗಾಳಿಬೀಡು ಸರ್ಕಾರಿ ಶಾಲಾ ಮೈದಾನದಲ್ಲಿ ಕ್ರೀಡಾಕೂಟವನ್ನು ಕೋಳುಮುಡಿಯನ ಅನಂತ್ ಕುಮಾರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಗೌಡ ಸಮುದಾಯಗಳ ನಡುವೆ ನಡೆಯುವ ವಿವಿಧ ಕ್ರೀಡಾಕೂಟ ಉದ್ಘಾಟನೆಯನ್ನ ನಮ್ಮ ಗಾಳಿಬೀಡಿನಿಂದ ಆರಂಭಿಸಿರುವುದು ಸಂತಸದ ವಿಚಾರ. ಗೌಡ ಯುವ ವೇದಿಕೆ ಸಂಘಟನೆ ಆರಂಭವಾಗಿದ್ದೆ ನಮ್ಮ ಸಮಾಜದ ಬಾಂದವರನ್ನು ಒಗ್ಗೂಡಿಸುವುದಕ್ಕಾಗಿ. ಸಣ್ಣದಾಗಿ ಆರಂಭವಾದ ಕೊಡಗು ಗೌಡ ಯುವ ವೇದಿಕೆ ಇದೀಗ ಹೆಮ್ಮರವಾಗಿ ಬೆಳೆದಿದೆ. ಹಿರಿಯರು ಹುಟ್ಟುಹಾಕಿದ ಯುವ ವೇದಿಕೆಯನ್ನು ಇಂದಿನ ಯುವಕರು ಮುಂದುವರಿಸಿಕೊಂಡು ಹೋಗಬೇಕು. ಹಲವಾರು ಕ್ರೀಡಾಕೂಟವನ್ನ ಆಯೋಜಿಸುವ ಮೂಲಕ ಸಮುದಾಯ ಬಾಂಧವರಲ್ಲಿ ಸಾಮರಸ್ಯವನ್ನ ಕೂಡ ಬೆಸೆಯುವಲ್ಲೂ ಉತ್ತಮ ವೇದಿಕೆಯನ್ನ ಹಾಕಿಕೊಟ್ಟಿದೆ. ವೇದಿಕೆ ಮತ್ತಷ್ಟು ಕಾರ್ಯಕ್ರಮಗಳನ್ನ ಮಾಡುವ ಮೂಲಕ ಮತ್ತಷ್ಟು ಯಶಸ್ಸು ಕಾಣಬೇಕು’ ಎಂದ ಹೇಳಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಮಾತನಾಡಿ, ಯುವ ವೇದಿಕೆ ಹಿಂದಿನಿಂದಲೂ ಬಹಳ ಏಳು ಬೀಳುಗಳ ನಡುವೆ ಕ್ರೀಡಾಕೂಟವನ್ನ ಆಯೋಜನೆ ಮಾಡಿಕೊಂಡು ಬರುತ್ತಿದೆ. ಜನರ ಪಾಲ್ಗೊಳುವಿಕೆ ಸಂಕಷ್ಟದ ಸಮಯದಲ್ಲೂ ಕಾರ್ಯಕ್ರಮ ಆಯೋಜನೆ ಮಾಡುವುದು ಕೂಡ ದೊಡ್ಡ ವಿಚಾರ. ಎಲ್ಲವನ್ನೂ ಸರಿದೂಗಿಸಿ ಸಮುದಾಯ ಬಾಂದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಗೌಡ ಯುವ ವೇದಿಕೆಯ ಅಧ್ಯಕ್ಷ ಬಾಲಡಿ ಮನೋಜ್ ಮಾತನಾಡಿ, ‘16 ದಿನದ ನಮ್ಮ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದೆ. ಗಾಳಿಬೀಡಿನಿಂದ ಆರಂಭವಾದ ಕಾರ್ಯಕ್ರಮ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಗೌಡ ಕುಟುಂಬಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಜೊತೆಗೆ ರಿಂಕ್ ಹಾಕಿ, ಮಿಸ್ಟರ್ ಗೌಡ ಗೌಡತಿ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದು ಗೌಡ ಸಮುದಾಯವರು ಎಲ್ಲರೂ ಕೂಡ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಕ್ರೀಡಾಪಟು ಹೊಸೋಕ್ಲು ಚಿಣ್ಣಪ್ಪ ಹಾಗೂ ಕೋಚನ ತೇಜಸ್ ಮಾತನಾಡಿದರು.

ಗೌಡ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ, ಉಪಾಧ್ಯಕ್ಷ ಎಡಿಕೇರಿ ಪ್ರಸನ್ನ, ಮುಖಂಡರಾದ ನಿವೃತ್ತ ಡಿವೈಎಸ್ಪಿ ಕೇಶವಾನಂದ, ಪೈಕೇರ ಮನೋಹರ್ ಮಾದಪ್ಪ, ಕೊಂಬನ ಪ್ರವೀಣ್, ಪೊನ್ನಚನ ಮಧು, ಕಟ್ಟೆಮನೆ ಸೋನಾಜಿತ್, ವಿನೋದ್ ಮೂಡಗದ್ದೆ, ದೇರಳ ನವೀನ್ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ವಿವಿಧ ವಿಭಾಗದಲ್ಲಿ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಿತು. ಅಂತರಾಷ್ಟ್ರೀಯ ಮ್ಯಾರಥಾನ್ ಓಟಗಾರರಾದ ಹೊಸೋಕ್ಲು ಚಿಣ್ಣಪ್ಪ ಹಾಗೂ ಕೋಚನ ತೇಜಸ್ ಓಟಕ್ಕೆ ಚಾಲನೆ ನೀಡಿದರು.

ಸಭಾಕಾರ್ಯಕ್ರಮದ ನಂತರ 0.22 ರೈಫಲ್, 12 ಬೋರ್ ಮತ್ತು ಏರ್ ಗನ್ ವಿಭಾಗದಲ್ಲಿ ಶೂಟಿಂಗ್ ಸ್ಪರ್ಧೆ ನಡೆಯಿತು.

0.22 ವಿಭಾಗದ ಸ್ಪರ್ಧೆಯನ್ನು ಕೊಡಗು ಗೌಡ ಯುವ ವೇದಿಕೆ ಮಾಜಿ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, 12 ಬೋರ್ ವಿಭಾಗದ ಸ್ಪರ್ಧೆಯನ್ನು ಯುವವೇದಿಕೆಯ ಗೌರವ ಅಧ್ಯಕ್ಷ ಪೊನ್ನಚನ ಮಧು ಮತ್ತು ಏರ್ ಗನ್ ಶೂಟಿಂಗ್ ಸ್ಪರ್ಧೆಯನ್ನು ಗೌರವ ಸಲಹೆಗಾರ ಕೊಂಬನ ಪ್ರವೀಣ್ ಶೂಟ್ ಮಾಡುವ ಮೂಲಕ ಉದ್ಘಾಟಿಸಿದರು.

ಏರ್ ಗನ್: ಚೇತನ್ ದೇವಾಯಿರ (ಪ್ರಥಮ), ಜಯ ಬೆಳ್ಳಿಯನ (ದ್ವಿತೀಯ), ಯಶ್ವಂತ್ ಬಾರನ (ತೃತೀಯ)

0.22 ರೈಫಲ್; ಜಗತ್ ಬೆಳ್ಳಿಯನ (ಪ್ರಥಮ), ಸಮರ್ಥ್ ಶಂಕರನ (ದ್ವಿತೀಯ), ನಿತಿನ್ ಕಾವೇರಿಮನೆ (ತೃತೀಯ)

12 ಬೋರ್: ರಾಜೇಶ್ ಕಟ್ಟೆಮನೆ (ಪ್ರಥಮ), ರಾಹುಲ್ ಅರಂಬೂರು (ದ್ವಿತೀಯ), ಮನೋಜ್ ಪೊಕ್ಕುಳಂಡ್ರ (ತೃತೀಯ)

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-1471541466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.