ಮಡಿಕೇರಿ: ಇಲ್ಲಿನ ಹೋಟೆಲ್ ರಾಜ್ದರ್ಶನ್ ಹಿಂಭಾಗದಲ್ಲಿರುವ ಗುರುಭ್ಯೋ ಮುನೀಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವವು ಏಪ್ರಿಲ್ 29ರಿಂದ ಮೇ 1ರವರೆಗೂ ನಡೆಯಲಿದೆ.

‘ಹಿಂದಿನಿಂದಲೂ ಬೃಹತ್ ಸಂಪಿಗೆ ಮರದ ಕೆಳಗೆ ಪುಟ್ಟ ದೇಗುಲವಿತ್ತು. ಸಂಪಿಗೆ ಮರ ಬಿದ್ದು ಹೋದ ನಂತರ ದೇಗುಲ ಶಿಥಿಲಾವಸ್ಥೆ ತಲುಪಿತು. ನಂತರ, ದೇಗುಲವನ್ನು ಪುನರ್ ನಿರ್ಮಿಸಲಾಗುತ್ತಿದೆ’ ಎಂದು ದೇಗುಲದ ಗೌರವ ಸಲಹೆಗಾರ ಗಜರಾಜನಾಯ್ಡು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಸಿ.ಎಸ್.ರಂಜಿತ್ಕುಮಾರ್ ಮಾತನಾಡಿ, ‘ಏಪ್ರಿಲ್ 29ರಂದು ಬೆಳಿಗ್ಗೆ 10.15ಕ್ಕೆ ಸಂಕಲ್ಪ, ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯವಾಚನ, ಸ್ಥಳಶುದ್ಧಿ, ರುದ್ರಪಾಠ ಪಠಣ, ಸುದರ್ಶನ ಪೂರ್ವಕ ಪ್ರಾಯಶ್ಚಿತ ತಿಲಹೋಮಗಳು ನಡೆಯಲಿವೆ’ ಎಂದರು. ಸಂಜೆ 6 ಗಂಟೆಗೆ ಬನ್ನಿಮಂಟಪದಿಂದ ಗುರುಭ್ಯೋ ಮುನೀಶ್ವರ ದೇಗುಲದವರೆಗೆ ಮಂಗಳವಾದ್ಯಗಳೊಂದಿಗೆ ಕಳಸ ಹೊತ್ತು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ ಎಂದು ಉತ್ಸವ ಸಮಿತಿಯ ರಾಕೇಶ್ ತಿಳಿಸಿದರು.

ಏಪ್ರಿಲ್ 30ರಂದು ಸಹ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಮೇ 1ರಂದು ಬೆಳಿಗ್ಗೆ 10.20ರಿಂದ 11.15ರವರೆಗೆ ಸಲ್ಲುವ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಗುರು ಮುನೀಶ್ವರ ಹಾಗೂ ಚಾಮುಂಡೇಶ್ವರಿ ದೇವಿಯ ಕಳಸ ಪೂರ್ವಕ ಪರಿವಾರ ದೇವತಾ ಬ್ರಹ್ಮ ಕಲಶೋತ್ಸವ ಪ್ರತಿಷ್ಠಾಪನೆ ನೆರವೇರಲಿದೆ ಎಂದರು.

ಖಜಾಂಚಿ ಸಿ.ಎಸ್.ಪವನ್ ಉತ್ಸವ ಸಮಿತಿಯ ಸತೀಶ್, ಗೌರವ ಸಲಹೆಗಾರ ಗುಣಶೇಖರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-51-1516230953

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.