ಸೋಮವಾರಪೇಟೆ: ತಾಲ್ಲೂಕಿನ ಹಾರಂಗಿ ಹಿನ್ನೀರು ಪ್ರದೇಶವಾದ ಗರಗಂದೂರು ಗ್ರಾಮದ ಸುತ್ತಮುತ್ತ ಕಾಡುಹಂದಿಗಳ ಹಾವಳಿ ಮಿತಿ ಮೀರಿದ್ದು, ಕೃಷಿ ಫಸಲು ಹಾನಿಯಾಗುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.

ಈ ಭಾಗದಲ್ಲಿ ಬೇಸಿಗೆ ಬೆಳೆಯಾದ ಜೋಳದ ಫಸಲು ಇನ್ನೇನು ಕಟಾವು ಮಾಡುವ ಹಂತಕ್ಕೆ ಬಂದಿದೆ. ಆದರೆ, ಕಾಡುಹಂದಿಗಳ ನಿರಂತರ ಹಾವಳಿಯಿಂದ ಬೆಳೆ ನೆಲಕಚ್ಚಿ ಹಾಳಾಗುತ್ತಿದೆ. ರಾತ್ರಿ ಹಗಲು ಎನ್ನದೆ ದಾಳಿ ಇಡುವ ಕಾಡು ಹಂದಿಗಳು ಫಸಲಿಗೆ ಬಂದ ಜೋಳದ ಬೆಳೆಯನ್ನ ಕಿತ್ತು ತಿನ್ನುತ್ತಿವೆ ಎಂದು ರೈತ ಸಚಿನ್ ಚನ್ನಬಸಪ್ಪ, ಚಂದನ್, ದೀಪಕ್, ಮಠದ ಮಂಜುಮಾಥ್ ಅಳಲು ತೋಡಿಕೊಂಡಿದ್ದಾರೆ.

ಒಂದು ಎಕರೆಯಲ್ಲಿ ಜೋಳದ ಬೆಳೆ ಬೆಳೆಯಲು ₹25,000ದಿಂದ ₹30,000 ಖರ್ಚಾಗುತ್ತದೆ. ಆದರೆ, ಕೈಗೆ ಬಂದ ಬೆಳೆಯನ್ನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಫಸಲು ನಾಶವಾಗಿದೆ. ಅಷ್ಟೇ ಅಲ್ಲದೇ, ಕಾಫಿ ತೋಟದೊಳಗಿನ ಮೆಣಸು ಬಳ್ಳಿಗಳ ಬುಡಗಳನ್ನು ತುಂಡರಿಸುವ ಕಾಡುಹಂದಿಗಳು ಕಾಂಡದ ರಸ ಹೀರುತ್ತಿವೆ. ಕೂಡಲೇ ಅರಣ್ಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ನಷ್ಟಕ್ಕೊಳಗಾದ ರೈತರು ಒತ್ತಾಯಿಸಿದ್ದಾರೆ.

ಹಂದಿಗಳ ಮೇಲೆ ಚಿರತೆ ದಾಳಿ: ತಾಲ್ಲೂಕಿನ ಶಾಂತಳ್ಳಿ ಗ್ರಾಮದ ವಿನುಕುಮಾರ್ ಅವರ ಕೊಟ್ಟಿಗೆಯಲ್ಲಿದ್ದ ಹಂದಿ ಮರಿಗಳ ಮೇಲೆ ಶನಿವಾರ ಸಂಜೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-51-1077696660

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.