ಮಡಿಕೇರಿ: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಮಕ್ಕಳಿಗಾಗಿ ‘ಅರಿವು’ ಎಂಬ ಹೆಸರಿನಡಿ 5 ದಿನಗಳ ವಿಶೇಷ ಬೇಸಿಗೆ ಶಿಬಿರವು ದಿಶಾ ಸಂಸ್ಥೆಯ ಸಹಯೋಗದೊಂದಿಗೆ ಆರಂಭವಾಗಿದೆ.

ಮಕ್ಕಳಿಂದಲೇ ದೀಪ ಬೆಳಗಿಸುವುದರ ಮೂಲಕ ವಿಶಿಷ್ಟವಾಗಿ ಶಿಬಿರ ಉದ್ಘಾಟಿಸಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಪಿ.ಪಿ.ಕವಿತಾ, ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಎಚ್.ಎ.ಹಂಸ, ದಿಶಾ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಕುಸುಂ ಮತ್ತು ಪ್ರೀತಂ ಪೊನ್ನಪ್ಪ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಎಚ್.ವಿ.ವತ್ಸಲಕುಮಾರಿ ಭಾಗವಹಿಸಿದ್ದರು.

ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೀತಂ ಪೊನ್ನಪ್ಪ, ‘ಈ ಶಿಬಿರದಲ್ಲಿ ಸಾಮಾಜಿಕ ಜವಾಬ್ದಾರಿ, ಆರೋಗ್ಯಯುತ ಆಹಾರ, ಭೂಮಿ ಮತ್ತು ನಾನು, ಪ್ರಕೃತಿ ಮತ್ತು ಪರಂಪರೆ, ನೈತಿಕತೆ ಮತ್ತು ಮೌಲ್ಯಗಳು ಎಂಬ 5 ಆಶಯಗಳ ಮೇಲೆ 5 ದಿನಗಳ ಈ ಶಿಬಿರ ನಡೆಯಲಿದೆ’ ಎಂದರು.

‘ಇಲ್ಲಿ ಮಕ್ಕಳು ಬರೆಯಲ್ಲ, ಓದಲ್ಲ. ಆದರೆ, ಚಟುವಟಿಕೆಗಳ ಮೂಲಕ ಅನುಭವಿಸಿ ಕಲಿಯುತ್ತಾರೆ ಹಾಗೂ ಮುಂದಿನ ದಿನಗಳಲ್ಲಿ ಇಲ್ಲಿ ಕಲಿತದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

‘ಸಾಮಾಜಿಕ ಜವಾಬ್ದಾರಿ’ ಕುರಿತು, ಆಲಿಸುವಿಕೆ ಮತ್ತು ಸಂವಹನದ ಮಹತ್ವ ಕುರಿತು ಉಪನ್ಯಾಸ ನೀಡಲಾಯಿತು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು, ನೀರು ಉಳಿಸುವುದು, ಆಹಾರ ವ್ಯರ್ಥ ಮಾಡದಿರುವುದು, ಹಿರಿಯರಿಗೆ ಸಹಾಯ ಮಾಡುವುದು, ಪ್ರಾಣಿಗಳ ಮೇಲೆ ಕರುಣೆ ತೋರಿಸುವುದು ಮುಂತಾದ ವಿಷಯಗಳನ್ನು ಅಭಿನಯಿಸಿದರು.

‘ನೈತಿಕತೆ ಮತ್ತು ಮೌಲ್ಯಗಳು’ ಎಂಬ ವಿಷಯ ಕುರಿತ ಚಟುವಟಿಕೆಯನ್ನೂ ಯಶಸ್ವಿಯಾಗಿ ನಡೆಸಲಾಯಿತು. ಮಕ್ಕಳಲ್ಲಿ ಉತ್ತಮ ನಡೆ-ನುಡಿ, ಪರಸ್ಪರ ಸಹಕಾರ, ತಂಡದ ಮನೋಭಾವ ಹಾಗೂ ಮೌಲ್ಯಾಧಾರಿತ ಚಿಂತನೆಗಳನ್ನು ಬೆಳೆಸುವ ಉದ್ದೇಶದಿಂದ ದಿನದ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಮಕ್ಕಳಿಗೆ ನೈತಿಕ ಮೌಲ್ಯಗಳ ಮಹತ್ವವನ್ನು ತಿಳಿಸಲಾಯಿತು. ಸತ್ಯನಿಷ್ಠೆ, ಸಹಾನುಭೂತಿ, ಪರಸ್ಪರ ಗೌರವ, ಸಹಕಾರ ಹಾಗೂ ಶಿಸ್ತು ಜೀವನದಲ್ಲಿ ಹೇಗೆ ಮುಖ್ಯವೆಂಬುದರ ಕುರಿತು ಚರ್ಚೆ ನಡೆಯಿತು.

ಮಕ್ಕಳನ್ನು ವಿವಿಧ ತಂಡಗಳಾಗಿ ವಿಭಜಿಸಿ, ತಂಡದಲ್ಲಿ ಕೆಲಸ ಮಾಡುವ ಗುಣವನ್ನು ಬೆಳೆಸುವ ವಿಶೇಷ ಆಟಗಳನ್ನು ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿ ವಾಂಚಿರ ಸುಭಾಷ್ ಅವರು ಜೀವನದಲ್ಲಿ ಉನ್ನತ ಮಟ್ಟ ತಲುಪಲು ಸಹಾಯಕವಾಗುವ ಸರಳ ಮೌಲ್ಯಗಳ ಮಹತ್ವವನ್ನು ವಿವರಿಸಿದರು. ದಯೆ, ಪ್ರಾಮಾಣಿಕತೆ, ಹಿರಿಯರಿಗೆ ಗೌರವ, ಪರಿಸರದ ಬಗ್ಗೆ ಕಾಳಜಿ ಹಾಗೂ ಶ್ರಮದ ಮೌಲ್ಯಗಳ ಕುರಿತು ಅವರು ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-1752128101

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.