ನಾಪೋಕ್ಲು: ಕೊಡಗು ಜಿಲ್ಲೆಯ ನೆಲಜಿ ಗ್ರಾಮದ ಪ್ರಕೃತಿ ರಮಣೀಯ ಕ್ಷೇತ್ರದಲ್ಲಿ ನೆಲೆ ನಿಂತಿರುವ ಶ್ರೀ ಈಶ್ವರ ಇಗ್ಗುತ್ತಪ್ಪ ದೇವರ ಮಹಿಮೆ ಅಪಾರ ಎಂದು ಮೇಲುಕೋಟೆ ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಹೇಳಿದರು.

ಅವರು ಕ್ಷೇತ್ರಕ್ಕೆ ತಮ್ಮ ಧರ್ಮಪತ್ನಿ ಸಹಿತ ಭೇಟಿ ನೀಡಿದ ಸಂದರ್ಭ ಮಾತನಾಡಿ, ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಪ್ರಶಂಶನೀಯ ಎಂದರು.

ಕೊಡಗಿನ ಮೂರು ಇಗ್ಗುತ್ತಪ್ಪ ದೇವಸ್ಥಾನಗಳಲ್ಲಿ ಒಂದಾದ ನೆಲಜಿಯ ದೇವಸ್ಥಾನವು ಬಲು ಸುಂದರವಾಗಿದ್ದು, ದಿವ್ಯ ಶಕ್ತಿಯನ್ನು ಹೊಂದಿದೆ. ಕೇವಲ ಊರ ಜನರ ಮತ್ತು ಭಕ್ತಾದಿಗಳ ಆರ್ಥಿಕ ನೆರವಿನಿಂದ ನಡೆಸಿದ ಅಭಿವೃದ್ಧಿ ಕಾರ್ಯಗಳು ನಿಜಕ್ಕೂ ಶ್ಲಾಘನೀಯ ಎಂದರು.

ಶ್ರೀ ಈಶ್ವರ ಇಗ್ಗುತ್ತಪ್ಪ ದೇವರ ಮಹಿಮೆಯ ವಿಶಿಷ್ಟ ಅನುಭವದಿಂದ ಪುನೀತರಾದ ಅವರು ಶ್ರೀ ದೇವರ ಅಭಿವೃದ್ಧಿ ಕಾರ್ಯಗಳಿಗೆ ತಾನೂ ಕೈಜೋಡಿಸಿ ದೇವರ ಸೇವೆಗೆ ಸದಾ ಸಿದ್ಧ ಎಂದು, ತಮ್ಮ ಮೊದಲ ಕಂತಿನ ದೇಣಿಗೆಯಾಗಿ ₹10 ಲಕ್ಷದ ಚೆಕ್ ಅನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತಕ್ಕ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ, ತಕ್ಕ ಮುಖ್ಯಸ್ಥ ಬದ್ದಂಜೆಟ್ಟಿರ ಬಿ. ನಾಣಯ್ಯ, ನಾಪನೆರವಂಡ ಪೊನ್ನಪ್ಪ, ಕಯ್ಯಂದಿರ ಉತ್ತಯ್ಯ, ಭಕ್ತ ಜನ ಸಂಘದ ಅಧ್ಯಕ್ಷ ಮುಕ್ಕಾಟಿರ ವಿನಯ್, ಮಣವಟ್ಟಿರ ಚೆಂಗಪ್ಪ, ಚೀಯಕಪೂವಂಡ ಅಪ್ಪಚ್ಚು, ಅಪ್ಪುಮಣಿ ಯಂಡ ಸೋಮಣ್ಣ, ಬದ್ದಂಜೆಟ್ಟಿರ ದೇವಯ್ಯ, ಅಪ್ಪುಮಣಿಯಂಡ ಉತ್ತಯ್ಯ, ಮಾಜಿ ಶಾಸಕರ ಭೇಟಿಗೆ ಮತ್ತು ಆರ್ಥಿಕ ನೆರವಿಗೆ ಸರ್ವ ರೀತಿಯಿಂದ ಸಹಕರಿಸಿದ ಪಾಡಿ ಶ್ರೀ ಈಶ್ವರ ಇಗ್ಗುತ್ತಪ್ಪ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ದಾನಿಗಳಾದ ಮಂಡಿರ ಜಯ ದೇವಯ್ಯ, ದಾನಿಗಳಾದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಕ್ಕಾಟಿರ ಜಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-1254333661

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.