ಶುಕ್ರವಾರ, 8 ಮೇ 2026
×
ADVERTISEMENT

ನಿರ್ಲಕ್ಷ್ಯಕ್ಕೆ ತುತ್ತಾಗಿವೆ ಕೊಡಗಿನ ಜೈನ ಸ್ಮಾರಕಗಳು

ಜೈನ ಬಸದಿಗಳಿಗೆ ಬೇಕಿದೆ ಮೂಲಸೌಕರ್ಯ, ದುರಸ್ತಿ ಕಾರ್ಯ
Published : 29 ಮಾರ್ಚ್ 2026, 23:47 IST
Last Updated : 30 ಮಾರ್ಚ್ 2026, 5:44 IST
ADVERTISEMENT
ಫಾಲೋ ಮಾಡಿ
Comments
ಉತ್ತರ ಕೊಡಗಿನಲ್ಲಿ ಸಾಕಷ್ಟು ಕಡೆ ಜೈನ ಧರ್ಮದ ಕುರುಹುಗಳು ಪತ್ತೆ |ನಿಷಿಧಿ ಕಲ್ಲುಗಳೂ ಸಹ ಕೊಡಗಿನಲ್ಲಿವೆ | ಸಂರಕ್ಷಣೆಗೆ, ಪ್ರಚಾರಕ್ಕೆ ಬೇಕಿದೆ ಇಚ್ಛಾಶಕ್ತಿ
ಮುಳ್ಳೂರು ಬಸದಿಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಕುರಿತು ನಾವು ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಅಭಿವೃದ್ಧಿಯಾಗಿಲ್ಲ. ಈ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗಲಿದೆ. ಶೌಚಾಲಯ ಸಹ ಇಲ್ಲಿಲ್ಲ. ಮುಳ್ಳೂರು ಜೈನ ಬಸದಿಗೆ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಈ ತಾಣ ಅಭಿವೃದ್ಧಿಯಾದರೆ ಇಲ್ಲಿನ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮದವರಿಗೆ ಅನುಕೂಲವಾಗುತ್ತದೆ.
ನಂದೀಪ್, ಮುಳ್ಳೂರು ಗ್ರಾಮಸ್ಥರು.
ಕೊಡಗಿನ ಗಡಿಭಾಗ ಹೊಸೂರು ಗ್ರಾಮದಲ್ಲಿ ಜೈನ ಬಸದಿ ಇದ್ದು, ಸಾವಿರ ವರ್ಷದ ಇತಿಹಾಸ ಹೊಂದಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ. ತೀರ್ಥಂಕರರ ಸೊಗಸಾದ ಎರಡು ವಿಗ್ರಹಗಳಿವೆ. ಬಸದಿ ಶಿಥಿಲವಾಗಿದ್ದರೂ, ಅದರ ಮುಂದೆ ಹೂವಿನ ಗಿಡಗಳನ್ನು ನೆಟ್ಟು, ಮರಗಳನ್ನು ಬೆಳೆಸಿ ಎಷ್ಟು ಸಾಧ್ಯವೋ ಅಷ್ಟು ಸಂರಕ್ಷಣೆ ಮಾಡುತ್ತಿದ್ದೇವೆ. ಸರ್ಕಾರ ಇನ್ನಷ್ಟು ಅಭಿವೃದ್ಧಿಗೊಳಿಸಿದರೆ ಇದೊಂದು ಪ್ರವಾಸಿತಾಣವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.
ರಮೇಶ್, ಹೊಸೂರು ಗ್ರಾಮ.
ಕೊಡಗಿನಲ್ಲಿ ಸಾಕಷ್ಟು ಕಡೆ ಜೈನ ಸ್ಮಾರಕಗಳಿವೆ, ನಿಷಿಧಿ ಕಲ್ಲುಗಳೂ ಸಾಕಷ್ಟು ಲಭ್ಯವಾಗಿವೆ. ಮಡಿಕೇರಿಯ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಅವುಗಳನ್ನೆಲ್ಲ ಸಂರಕ್ಷಿಸಿಡಲಾಗಿದೆ.
ಬಿ.ಪಿ.ರೇಖಾ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್.
ಕೊಡಗಿನಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಸಾಕಷ್ಟು ಸ್ಮಾರಕಗಳಿವೆ, ಬಸದಿಗಳಿವೆ. ಸರ್ಕಾರ ಕೂಡಲೇ ಎಲ್ಲ ಬಸದಿಗಳು, ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಬೇಕು. ಈ ಮೂಲಕ ಇತಿಹಾಸ ಉಳಿಸಬೇಕು.
ಪುಷ್ಪರಾಜ್, ವಿರಾಜಪೇಟೆ ಜೈನಸಮಾಜದ ಅಧ್ಯಕ್ಷ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮುಳ್ಳೂರು, ಕಲ್ಕಂದೂರು, ಗಡಿಭಾಗ ಹೊಸೂರು ಗ್ರಾಮದಲ್ಲಿ ಜೈನಬಸದಿಗಳಿವೆ. ಮುಳ್ಳೂರಿನ ಜೈನಬಸದಿಗಳು, ಶಾಸನಗಳು ಸಂರಕ್ಷಿತವಾಗಿವೆ. ಹೊಸೂರಿನಲ್ಲಿ ಪಾಣಿಪೀಠ ಇದ್ದು, ಮೂರ್ತಿ ಇಲ್ಲ. ಶಾಸನಗಳಲ್ಲಿ ಅನೇಕ ಉಲ್ಲೇಖಗಳೂ ಇವೆ.
ಕುಮಾರಸ್ವಾಮಿ, ಭಾರತೀಯ ಪುರಾತತ್ವ ಇಲಾಖೆಯ ಸ್ಮಾರಕ ರಕ್ಷಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT