ನಾಪೋಕ್ಲು: ಮಡಿಕೇರಿ ತಾಲ್ಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಕನ್ನಡ ಕಂಪು ಸೂಸಲು ಕಡಂಗ ಗ್ರಾಮ ಸಜ್ಜುಗೊಂಡಿದೆ.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅದಕ್ಕಾಗಿ ಮಂಗಳವಾರ ಭರದ ಸಿದ್ಧತೆಗಳು ನಡೆದವು.

ಅರಪಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎ.ಎಸ್.ಪೊನ್ನಣ್ಣ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಡಾ.ಮಂತರ್ಗೌಡ ವಿನೂತನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ಲೇಖಕ ಮೊಹಮದ್ ನಿಝಾರ್ ಸಖಾಫಿ ಅವರ ಪುಸ್ತಕ ‘ಕಡಂಗದ ನೆನಪಿನಂಗಳ’ದಲ್ಲಿ ಬಿಡುಗಡೆಯಾಗಲಿದೆ. ವೈವಿಧ್ಯಮಯ ಕಾರ್ಯಕ್ರಮಗಳಿಗೆ ಕಡಂಗದಲ್ಲಿ ವೇದಿಕೆಗಳು ಸಜ್ಜಾಗಿವೆ ಎಂದು ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ , ಕಸಾಪ ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 8 ಗಂಟೆಗೆ ದಿ.ಪಾಂಡಂಡ ಕುಟ್ಟಣಿ ಸಭಾ ಮಂಟಪದ ಮುಂಭಾಗ ಕಸಾಪ ಹಣಕಾಸು ಸಮಿತಿ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಕಸಾಪ ಧ್ವಜಾರೋಹಣ ಮಾಡಲಿದ್ದಾರೆ.

11 ನೆನಪಿನ ದ್ವಾರಗಳನ್ನು ನಿರ್ಮಿಸಲಾಗಿದ್ದು, ಬೆಳಿಗ್ಗೆ ಉದ್ಘಾಟಿಸಲಾಗುವುದು. ಕುಲ್ಲಚಂಡ ದಿ.ಲಾಲುಮೇದಯ್ಯ ಮತ್ತು ಬಿ ದೇವಕ್ಕ ನೆನಪಿನ ಪ್ರವೇಶ ದ್ವಾರ, ದೇಯಿರ ಕುಟುಂಬಸ್ಥರ ನೆನಪಿನ ಪ್ರವೇಶ ದ್ವಾರ, ಮೇದುರ ದಿ. ನಂಜಪ್ಪ ಹಾಗೂ ದಿ. ಸೀತಮ್ಮ ನೆನಪಿನ ಪ್ರವೇಶ ದ್ವಾರ ಕೋಡಿರ ದಿ. ಮುತ್ತಣ್ಣ ಹಾಗೂ ದಿ.ಸುನಂದಿ ಮುತ್ತಣ್ಣ ನೆನಪಿನ ಪ್ರವೇಶ ದ್ವಾರ, ಚಲ್ಮಂಡ ದಿ.ಸುಬ್ಬಯ್ಯ ಹಾಗೂ ದಿ.ಕಾಮವ್ವ ನೆನಪಿನ ಪ್ರವೇಶ ದ್ವಾರ, ನಂಬಿಯಪಂಡ ದಿ.ಅಪ್ಪಣ್ಣ ನೆನಪಿನ ಪ್ರವೇಶ ದ್ವಾರ, ಮುಕ್ಕಾಟಿರ ದಿ.ಚಂಗಪ್ಪ ಹಾಗೂ ಡಿ. ಕಾಂಜೀವ ನೆನಪಿನ ಪ್ರವೇಶ ದ್ವಾರ 11ಯ ನೆನಪಿನ ಪ್ರವೇಶ ದ್ವಾರ 11ರಡಿ ಉತ್ತಪ್ಪ ಹಾಗೂ ದಿ.ಪಾರ್ವತಿ ನೆನಪಿನ ಪ್ರವೇಶ ದ್ವಾರ, ದಿ. ಪಾಲಚಂಡ ಮಿಟ್ಟು ಕಾವೇರಪ್ಪ ಹಾಗೂ ದಿ. ಬೋಜಕ್ಕಿ ನೆನಪಿನ ಪ್ರವೇಶ ದ್ವಾರಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬಳಿಕ ವಿವಿಧ ಕಲಾತಂಡಗಳ ಉದ್ಘಾಟನೆ ನೆರವೇರಲಿದೆ. ಬಳಿಕ ಮುಖ್ಯದ್ವಾರ, ಪುಸ್ತಕ ಮಳಿಗೆ, ಸ್ತ್ರೀ ಶಕ್ತಿ ಮಳಿಗೆ ಸಭಾಂಗಣ ಮತ್ತು ವೇದಿಕೆ ಉದ್ಘಾಟನೆ ನೆರವೇರಲಿದೆ.

ಕಡಂಗದಲ್ಲಿ ಪ್ರಥಮ ಬಾರಿಗೆ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಅಧಿಕ ಸಂಖ್ಯೆಯ ಸಾಹಿತ್ಯಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಂಗಳವಾರ ಪಾರಾಣೆ, ಕೋಕೇರಿ, ಚೆಯ್ಯಂಡಾಣೆ, ಕಿಕ್ಕರೆ ಎಡಪಾಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವ್ಯಾಪಕ ಪ್ರಚಾರ ನಡೆಸಲಾಯಿತು ಎಂದು ಪ್ರಚಾರ ಸಮಿತಿಯ ಅಧ್ಯಕ್ಷ ಅಶ್ರಫ್ ಕಡಂಗ ಹೇಳಿದರು.

ಮೆರವಣಿಗೆಯಲ್ಲಿ ಮೇಳೈಸಲಿವೆ ಕಲಾತಂಡಗಳು

ಇದಕ್ಕೂ ಮುನ್ನ ಕಡಂಗ ವಿಜಯ ಪ್ರೌಢಶಾಲೆಯಿಂದ ಮುಖ್ಯ ರಸ್ತೆಗಾಗಿ ಜಿಎಂಪಿ ಶಾಲಾ ಮೈದಾನದ ಸಭಾಂಗಣದವರೆಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾತಂಡಗಳು ಪಾಲ್ಗೊಳ್ಳಲಿವೆ. ಮಂಗಳವಾದ್ಯ ,ಚಂಡೆ ವಾದ್ಯ ,ಕಳಸ ಹೊತ್ತ ಮಹಿಳೆಯರು, ಸ್ಥಬ್ಧಚಿತ್ರಗಳು, ಗೊಂಬೆಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕೊಡಗಿನ ವಾಲಗ, ಬ್ಯಾಂಡ್ಸೆಟ್, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಎನ್ಸಿಸಿ ತಂಡ, ಸ್ಕೌಟ್ ಮತ್ತು ಗೈಡ್ಸ್ ತಂಡಗಳು ಪಾಲ್ಗೊಳ್ಳಲಿವೆ.

ಕಾರ್ಯಕ್ರಮ ವೈವಿಧ್ಯ

* ಮಧ್ಯಾಹ್ನ 1 ರಿಂದ 2 ರವರೆಗೆ ಕನ್ನಡ ಗೀತ ಗಾಯನ

* 2ರಿಂದ 3 ಗಂಟೆವರೆಗೆ ವಿಚಾರಗೋಷ್ಠಿ,
* 3 ರಿಂದ 3.30 ರವರೆಗೆ ಕವಿಗೋಷ್ಠಿ
* 3.30 ರಿಂದ 4 ಗಂಟೆವರೆಗೆ ಬಹಿರಂಗ ಅಧಿವೇಶನ
* 4 ರಿಂದ 5 ಗಂಟೆವರೆಗೆ ಸಾಧಕರಿಗೆ ಸನ್ಮಾನ
* 5 ರಿಂದ6 ಗಂಟೆವರೆಗೆ ಸಮಾರೋಪ ಸಮಾರಂಭ
* 6 ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-500302831

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.