ಸುಂಟಿಕೊಪ್ಪ: ಇಲ್ಲಿನ ಗದ್ದೆಹಳ್ಳದ ಕೊಡಂಗಲ್ಲೂರು ಭದ್ರಕಾಳಿ ಕುರುಂಬ, ಭಗವತಿ ದೇವಸ್ಥಾನದ ಮಹಾಪೂಜೆಯು ಗುರುವಾರ ನಡೆಯಿತು.

ಬುಧವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಚಾಲನೆ ದೊರೆಯಿತು. ಸಂಜೆ ಗಣಪತಿ ಪೂಜೆ, ಸುಬ್ರಹ್ಮಣ್ಯ ದೇವರ ಪೂಜೆ, ನಂತರ ಮುತ್ತಪ್ಪ ದೇವರ ಬೆಳ್ಳಾಟ ನಡೆದು ಮುತ್ತಪ್ಪ ದೇವರಿಗೆ ಪೈಂಗುತ್ತಿ ನಡೆಯಿತು. ರಾತ್ರಿ ಚಾಮುಂಡೇಶ್ವರಿ ಪೂಜೆ, ಗುಳಿಗನ ,ಭದ್ರಕಾಳಿ ದೇವಿಗೆ ಅರ್ಚನೆ ಮತ್ತು ನೈವೇದ್ಯ ಪೂಜೆ ನೆರವೇರಿತು.

ರಾತ್ರಿ ವಸೂರಿಮಲೆ ತಲಪುರಿ ಸ್ನಾನ ಮೆರವಣಿಗೆಯಲ್ಲಿ ಭಕ್ತರ ಉದ್ಘೋಷ, ವಾದ್ಯದೊಂದಿಗೆ ಹಣತೆ ಹಿಡಿದು ಮಹಿಳೆಯರು, ಮಕ್ಕಳು ಸೇರಿದ್ದ ಮೆರವಣಿಗೆ ದೇವಾಲಯದಲ್ಲಿ ಸಮಾಪ್ತಿಗೊಂಡಿತು. ವಸೂರಿಮಾಲೆ ದೇವರ ವೆಳ್ಳಾಟಂ ಮತ್ತು ದೇವಿಯ ದರ್ಶನ ನಡೆಯಿತು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ಗುರುವಾರ ಬೆಳಿಗ್ಗೆ ದೇವಿ ಹರಕೆ, ಅನ್ನಸಂತರ್ಪಣೆ ನಡೆಯಿತು. ದೇವಾಲಯದ ಮುಖ್ಯಸ್ಥರಾದ ಪಿ.ಆರ್.ಸುಕುಮಾರ್, ಸುನಿಲ್ ಕುಮಾರ್, ಶಾಂತ, ಪುಟ್ಟಬಸಪ್ಪ, ರೂಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-51-294617844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.